ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಮತ್ತೆ ಪರೀಕ್ಷೆ ಮಾಡಿದರೆ ಇಷ್ಟು ವರ್ಷ ಪಟ್ಟ ಶ್ರಮವೆಲ್ಲ ವ್ಯರ್ಥವಾಗುತ್ತದೆ, ಯಾರೋ ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಆದರೆ ಇದೀಗ ಕೋರ್ಟ್ ಕೂಡ ರಾಜ್ಯ ಸರ್ಕಾರ ತೀರ್ಮಾನಿಸದ ಹಾಗೇ ಮರುಪರೀಕ್ಷೆಗೆ ಕೋರ್ಟ್ ಕೂಡ ಅಸ್ತು ಎಂದಿದೆ.
ರಾಜ್ಯ ಸರ್ಕಾರದ ಮರುಪರೀಕ್ಷೆ ಆದೇಶವನ್ನು ಪ್ರಶ್ನಿಸಿ, ಬೆಂಗಳೂರಿನ ಪವಿತ್ರಾ ಸೇರಿದಂತೆ 28 ಜನ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಮೊದಲ ಆದೇಶದ ಪ್ರಕಾರ ನೇಮಕಾತಿ ಆದೇಶವನ್ನು ನೀಡಬೇಕು ಎಂದು ಅರ್ಜಿದಾರರು ರಾಜ್ಯ ಆಡಳಿತ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇದೀಗ ರಾಜ್ಯ ಸರ್ಕಾರದ ತೀರ್ಪನ್ನೇ ಎತಚತಿ ಹಿಡಿದಿದೆ.
ರಾಜ್ಯ ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಪರೀಕ್ಷೆಗೆ ಆದೇಶ ನೀಡಿತ್ತು. ಇದೀಗ ರಾಜ್ಯ ಆಡಳಿತ ನ್ಯಾಯ ಮಂಡಳಿ ರಾಜ್ಯ ಸರ್ಕಾರದ ತೀರ್ಪನ್ನೇ ಎತ್ತಿ ಹಿಡಿದಿದ್ದು, ಈ ನೇಮಕಾತಿ ಹಗರಣ ತುಂಬಾನೇ ವ್ಯಾಪಕವಾಗಿದೆ. ಇದರಲ್ಲಿ ಕಳಂಕಿತರು ಮತ್ತು ಕಳಂಕರಹಿತರನ್ನು ಬೇರ್ಪಡಿಸಲು ಸಾಧ್ಯವಾಗದು. ಇನ್ನು ನೇಮಕಾತಿಯ ವಿಭಾಗದ ಅಧಿಕಾರಿಯೇ ಬಂಧಿತರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.