ಸುದ್ದಿಒನ್, ದಾವಣಗೆರೆ, ಏಪ್ರಿಲ್. 11 : ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿಯಾಗಿ ಆಡಿದ ಮಾತುಗಳ ಜೊತೆಗೆ ಉದ್ರೇಕಿಸುವ, ಪ್ರಚೋದಿಸುವ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಂತ ಮಾತುಗಳನ್ನು ಆಡಿರುವುದನ್ನು ಖಂಡಿಸಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಯಶವಂತರಾವ್ ಜಾದವ್, ಮಾಜಿ ಧೂಡಾ ಅದ್ಯಕ್ಷರು ಅಧ್ಯಕ್ಷರು ರಾಜ್ಯ ಬಿಜೆಪಿ ಓಬಿಸಿ ಮೋರ್ಚಾದ ಉಪಾಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಅಣಬೇರು ಜೀವನಮೂರ್ತಿ, ಹನಗವಾಡಿ ವೀರೇಶ್, ಬಿ ರಮೇಶ್ ನಾಯಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಆರ್ ಎಲ್ ಶಿವಪ್ರಕಾಶ್, ಬಾಲರಾಜ್, ಶಿವಾನಂದ್, ಹರೀಶ್ ಹೋನ್ನೂರ್, ರವಿಕುಮಾರ್, ನವೀನ್ ಕುಮಾರ್ ಹೆಚ್‍ಬಿ, ಪುಲಯ್, ಟಿಂಕರ್ ಮಂಜಣ್ಣ, ಎಸ್ ಬಾಬಣ್ಣ, ಈರಣ್ಣ, ಕಿಶೋರ್ ಕುಮಾರ್, ಸಂತೋಷ್ ಕೋಟಿ, ಎರಿಸ್ವಾಮಿ, ಹನುಮಂತಣ್ಣ, ಕುಮಾರ್, ವಿನಾಯಕ್, ಸಂದೇಶ್, ಶಿವನಗೌಡ ಟಿ ಪಾಟೀಲ್, ರೇಣುಕ್ ಮೂರ್ತಿ, ಉಪಸ್ಥಿತರಿದ್ದರು.


