ಹಾವೇರಿ : ತ್ರಿಪುರಾದಲ್ಲಿ ನಡೆದ ಕೋಮುಗಲಭೆಯನ್ನ ಖಂಡಿಸಿ, ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಅನ್ಯ ಕೋಮಿನ ಯುವಕರು ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಆರ್ ಎಸ್ ಎಸ್ ಮುಖಂಡರ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆ ನಡೆದಿರೋದು ಸಿಎಂ ತವರು ಜಿಲ್ಲೆಯಾದ ಸವಣೂರಿನಲ್ಲಿ.
ಪ್ರತಿಭಟನೆ ವೇಳೆ ಹಲವರು ಆಕ್ಷೇಪಾರ್ಹ ಹೇಳಿಕೆಗಳನ್ನ ಹೇಳಿದ್ದಾರೆ ಎನ್ನಲಾಗಿದೆ. ಆರ್ ಎಸ್ ಎಸ್ ಮುರ್ದಾಬಾದ್ ಎಂಬ ಹೇಳಿಕೆ ಸೇರಿದಂತೆ ಇನ್ನು ಹಲವು ಘೋಷಣೆಗಳನ್ನ ಪ್ರಯಿಭಟನೆಯಲ್ಲಿ ಭಾಗಿಯಾದ ಯುವಕರು ಕೂಗಿದ್ದಾರೆ ಎನ್ನಲಾಗಿದೆ.
ಈ ರೀತಿಯ ಘಟನೆಯನ್ನು ಹಲವು ಸಂಘಟನೆಗಳು ಖಂಡಿಸಿದ್ದು, ಪೊಲೀಸರ ಮೊರೆ ಹೋಗಿದ್ದಾರೆ. ಠಾಣೆ ಎದುರು ಕುಳಿತು ಆಕ್ರೋಶ ಹೊರ ಹಾಕಿದ್ದು, ಈ ರೀತಿ ಗಲಭೆ ಹಚ್ಚುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.