ಧಾರವಾಡ: ಸರ್ಕಾರಿ ಹುದ್ದೆಗಳು ಸಾಕಷ್ಟು ಖಾಲಿ ಇದ್ದರು, ಅವುಗಳ ನೇಮಕಾತಿ ಮಾತ್ರ ಆಗ್ತಾ ಇಲ್ಲ. ಇದನ್ನ ವಿರೋಧಿಸಿ ಇಂದು ಧಾರವಾಡದಲ್ಲಿ ಬೃಹತ್ ಹೋರಾಟಕ್ಕೆ ಕರೆಯನ್ನ ಕೊಡಲಾಗಿದೆ. ಜನಸಾಮಾನ್ಯರ ವೇದಿಕೆ ಪ್ರತಿಭಟನೆಗೆ ಕರೆ ಕೊಡಲಾಗಿದೆ. ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಈ ಹೋರಾಟ ನಡೆಯುತ್ತೆ. ಸರ್ಕಾರದ ವಿರುದ್ಧ ಉದ್ಯೋಗಕಾಂಕ್ಷಿಗಳ ಹೋರಾಟ ಇದಾಗಿದೆ.
ಈ ಪ್ರತಿಭಟನೆ ಮಾಡುವುದಕ್ಕೆ ಪೊಲೀಸರು ಅನುಮತಿಯನ್ನ ನಿರಾಕರಿಸಿದ್ದಾರೆ. ಮತ್ತೊಂದು ಕಡೆ ಹೋರಾಟಗಾರರು ಪಟ್ಟು ಹಿಡಿದು ಹೋರಾಟವನ್ನ ಮಾಡ್ತಾ ಇದ್ದಾರೆ. ಸೆಪ್ಟೆಂಬರ್ 25ರಂದು ವಿದ್ಯಾರ್ಥಿಗಳ ಒಂದು ಹೋರಾಟ ನಡೆದಿತ್ತು. ಅದರಲ್ಲಿ 8-10 ಸಾವುರ ವಿದ್ಯಾರ್ಥಿಗಳು ಅದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೆಲವೊಂದು ಅಹಿತಕರ ಘಟನೆ ಆ ಸಂದರ್ಭದಲ್ಲಿ ನಡೆದಿತ್ತು. ಕೇಂದ್ರ ಸರ್ಕಾರ ಕೂಡ ಖಾಲಿ ಇರುವ ಹುದ್ದೆಯನ್ನು ತುಂಬಿಸಬೇಕು ಎಂದು ಆಗ್ರಹಿಸ್ತಾ ಇದ್ದಾರೆ. ವಿದ್ಯಾರ್ಥಿಗಳು ಮಾಡಿದಂತೆ ನಾವೂ ಹೋರಾಟ ಮಾಡ್ತೀವಿ ಅಂತ ಸಂಘಟನೆ ಹೇಳಿದ್ದು, ಅದನ್ನು ಪೊಲೀಸರು ನಿರಾಕರಿಸಿದ್ದರು.
ಆದರೂ ಪ್ರತಿಭಟನೆ ನಡೆಸಿಯೇ ನಡೆಸ್ತೀವಿ ಅಂತ ಶ್ರೀನಗರ ವೃತ್ತದ ಬಳಿ ಸೇರಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಶ್ರೀನಗರ ವೃತ್ತದ ಬಳಿ ಪೊಲೀಸರು ಹಡಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಇನ್ನು ಪ್ರತಿಭಟನಾಕಾರರ ಮನವೊಲಿಸುವ ಕೆಲಸವನ್ನು ಕಮಿಷನರ್ ಶಶಿಕುಮಾರ್ ಅವರು ಮಾಡಿದರು. ನಾವೂ ಈ ವಿಚಾರವಾಗಿ ಗೃಹ ಸಚಿವರ ಬಳಿಯೂ ಮಾತನಾಡಿದ್ದೇವೆ. ಇದು ಅನುಮತಿ ತೆಗೆದುಕೊಂಡು ಮಾಡುತ್ತಿರುವ ಪ್ರತಿಭಟನೆಯಲ್ಲ. ನಾನೇಳೋದನ್ನ ಸಮಾಧಾನವಾಗಿ ಕೇಳಿ ಎಂದು ಎಲ್ಲರಿಗೂ ಬುದ್ಧಿ ಮಾತು ಹೇಳಿದರು. ಇದೇ ವೇಳೆ ಹಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರು.






