ಪರಿಸರವನ್ನು ರಕ್ಷಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ : ಡಾ ತೋಯಜಾಕ್ಷಿ ಬಾಯಿ

1 Min Read

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27 : ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚಾಗಿದೆ. ಈ ರೋಗವನ್ನು ತಡೆಗಟ್ಟಲು 16 ರಿಂದ 46 ವಯಸ್ಸಿನ ಸ್ತ್ರೀ ಹಾಗೂ ಪುರುಷರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಡಾ. ತೋಯಜಾಕ್ಷಿ ಬಾಯಿ ಹೇಳಿದರು.

ನಗರದ ಧವಳಗಿರಿ ಬಡಾವಣೆಯಲ್ಲಿರುವ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ)ದಲ್ಲಿ ಚಿತ್ರದುರ್ಗ ಜಿಲ್ಲಾ ದೇವಾಲಯ ಸಂವರ್ಧನಾ ಸಮಿತಿ ಮತ್ತು ಚಿತ್ರದುರ್ಗ ಜಿಲ್ಲಾ ಪತಂಜಲಿ ಯೋಗ ಟ್ರಸ್ಟ್‌ (ರಿ) ಇವರ ಸಹಯೋಗದೊಂದಿಗೆ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು, ತಪಸ್ಮಾ ಶಿಬಿರದ ಮೂಲಕ ಬ್ರೆಸ್ಟ್ ಕ್ಯಾನ್ಸರ್ ಸರ್ವೆಕಲ್ ಕ್ಯಾನ್ಸರ್ ತಪಾಸಣೆ ಮಾಡಲಾಯಿತು. ಈ ಉಚಿತ ಶಿಬಿರದಲ್ಲಿ 120 ಸ್ತ್ರೀಯರಲ್ಲಿ ಡಯಾಬಿಟಿಕ್, 20 ಹನೇಮಿಯಾ 8 ಪರ್ಸೆಂಟ್ ಕಂಡುಬಂದಿದೆ. ಇದರ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ.
ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಗಿಡ ಮರಗಳನ್ನು ಕಡಿದು ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ನಗರಗಳಲ್ಲಿ ಮನೆಗೊಂದು ಗಿಡ ಬಳಸಿದರೆ ಆರೋಗ್ಯ ಚೆನ್ನಾಗಿರುತ್ತದೆ. ತಪಾಸಣಾ ಶಿಬಿರ ಆ ಯೋಜನೆ ಮಾಡಿದ್ದ ಎಲ್ಲರಿಗೂ ಹಾಗೂ ಸಹಕಾರ ನೀಡಿದ ಡಾ ಪ್ರಹ್ಲಾದ ಎನ್. ಬಿ. ಅವರಿಗೆ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ತೋಯಜಾಕ್ಷಿ ಬಾಯಿ ಹಾಗೂ ಡಾ. ಪ್ರಹ್ಲಾದ ಎನ್. ಬಿ. ಅವರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಆಯೋಜಕರಾದ ಸದಸ್ಯರುಗಳಾದ ಜಿ.ಎಂ. ಲವಕುಮಾರ್, ಗುರುಮೂರ್ತಿ, ಶ್ರೀಕಾಂತ, ರಘು, ಶ್ರೀನಿವಾಸ್, ದೇವಾನಂದ ನಾಯಕ್, ಆಡಿಟರ್ ಗಂಗಣ್ಣ, ಶಶಿಕಿರಣ್, ಮುನಿಯಪ್ಪ, ಕೆಂಚವಿರಪ್ಪ, ಈಶ್ವರಪ್ಪ, ರಾಜಣ್ಣ, ಕಾಂತರಾಜ್, ಮುರುಗೇಶಣ್ಣ, ಪೊಲೀಸ ರಘು ಹಾಗೂ ಯೋಗ ಸಮಿತಿ ಹಾಗೂ ದೇವಾಲಯ ಸಮಿತಿಯ ಸದಸ್ಯರುಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks