ಕೊಲ್ಕತ್ತಾ: ಮೊಹಮ್ಮದ್ ಪೈಗಂಬರ್ ಬಗ್ಗೆ ನೂಪೂರ್ ಶರ್ಮಾ ನೀಡಿದ ಅವಹೇಳನಕಾರಿ ಹೇಳಿಕೆಯಿಂದಾಗಿ ಮುಸ್ಲಿಂ ಸಮುದಾಯ ರೊಚ್ಚಿಗೆದ್ದಿದೆ. ದೇಶದ ಹಲವೆಡೆ ಪ್ರತಿಭಟನೆಯ ಕಾವು ಹೆಚ್ಚಿದೆ. ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಗಲಭೆ ಸೃಷ್ಟಿಯಾಗಿದೆ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿದೆ. ಪೊಲೀಸರು ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ನಿರತರಾಗಿದ್ದಾರೆ. ಈ ಬೆನ್ನಲ್ಲೆ ರೈಲಿಗೆ ನುಗ್ಗಿ ಧ್ವಂಸ ಮಾಡಿರುವುದಲ್ಲದೆ, ಪ್ರಯಾಣಿಕರಿಗೂ ಗಾಯವಾಗುವಂತ ಘಟನೆ ನಡೆದಿದೆ.
ಬೆತುಗಾದಹರಿ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈಲ್ವೇ ಸ್ಟೇಷನ್ ಒಳಗೆ ನುಗ್ಗಿದ ಮುಸ್ಲಿಂರು ರೈಲಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಈ ವೇಳೆ ಹಲವು ಪ್ರಯಾಣಿಕರಿಗೆ ಗಾಯಗಳಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ಹೊರಕಳುಹಿಸಿದ್ದಾರೆ. ಅಲ್ಲಿಂದ ಕಾಲ್ಕಿತ್ತವರು ಹೊರಗಡೆ ಇರುವ ಅಂಗಡಿಗಳ ಮೇಲೂ ದಾಳಿ ನಡೆಸಿ, ಕಲ್ಲು ತೂರಾಟ ಮಾಡಿದ್ದಾರೆ.
ಈಗಾಗಲೇ ನೂಪೂರ್ ಶರ್ಮಾರನ್ನು ಬಿಜೆಪಿ ತನ್ನ ಪಕ್ಷದಿಂದ ವಜಾಗೊಳಿಸಿದೆ. ಆದರೆ ನೂಪೂರ್ ಶರ್ಮಾರನ್ನು ಬಂಧಿಸಬೇಕು ಎಂದು ಮುಸ್ಲಿಂ ಸಂಘಟನೆಗಳು ಒಟ್ಟು ಹಿಡಿದಿವೆ. ಹೀಗಾಗಿ ದೇಶದ ಹಲವೆಡೆ ಪ್ರತಿಭಟನೆಯ ಕಾವು ಜೋರಾಗಿದೆ. ಇದರ ಮಧ್ಯೇ ನೂಪೂರ್ ಶರ್ಮಾ ಬೆಂಬಲಕ್ಕೆ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನಿಂತಿದ್ದಾರೆ. ಈಗಾಗಲೇ ಕ್ಷಮೆ ಕೇಳಿದ್ದರು ಮಹಿಳೆಯೊಬ್ಬರ ಮೇಲೆ ಈ ರೀತಿ ಹೋರಾಟಗಳು ನಡೆಯುತ್ತಿದ್ದರು, ಜಾತ್ಯಾತೀತ ಉದಾರವಾದಿಗಳು ಮೌನವಾಗಿದ್ದಾರೆ ಎಂದಿದ್ದಾರೆ.