ಪಾಕಿಸ್ತಾನ ಪರ ಘೋಷಣೆ ವಿಚಾರ : ಕಲಾಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆಕ್ರೋಶ

1 Min Read

 

 

ಬೆಂಗಳೂರು: ನಿನ್ನೆ ರಾಜ್ಯಸಭಾ ಚುನಾವಣೆಯ ಫಲಿತಾಂಶ ಬಂದಾಗಿದೆ. ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು ಬಿಜೆಪಿ ನಾಯಕರು ಕೆಂಡಾಮಂಡಲರಾಗಿದ್ದಾರೆ. ಇಂದು ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಪಾಕಿಸ್ತಾನದ ಪರ ಘೋಷಣೆಯ ವಿಚಾರವೇ ಪ್ರತಿಧ್ವನಿಸಿದೆ.

ಕಲಾಪದಲ್ಲಿಯೇ ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಕ್ರೋಶ ಹೊರ ಹಾಕಿ, ತೀವ್ರ ಗದ್ದಲ ಶುರು ಮಾಡಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ‌ ನಡೆಸಿ, ಪಾರ್ಲಿಮೆಂಟಿನಲ್ಲಿ ಯಾರೂ ಕೂಡ ಪಾಕಿಸ್ತಾನದ ಪರ ಘೋಷಣೆ ಕೂಗಿಲ್ಲ. ಇದು ಕರ್ನಾಟಕದ ಏಳು ಕೋಟಿ ಜನರ ಆತ್ಮ ಇರುವ ಜಾಗ. ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ‌. ಯಾರೂ ರಕ್ಷಣೆ ಕೊಡಬೇಕಾಗುತ್ತೋ, ಅವರೇ ರೆಡ್ ಕಾರ್ಪೆಟ್ ಹಾಕಿದ್ದಾರೆ. ಪಾಕಿಸ್ತಾನದ ಪರ ಘೋಷಣೆ ಕೂಗಿದವರು ಪಾಕಿಸ್ತಾನದವರೇ. ಇಲ್ಲಿ ಇನ್ನೆಷ್ಟು ಪಾಕಿಸ್ತಾನದವರು ಇದ್ದಾರೋ ಗೊತ್ತಿಲ್ಲ. ನಮಗೆ ಸಾಕಷ್ಟು ಭಯವಾಗುತ್ತಿದೆ. ಯೋಧರಿಗೆ ಹೇಗೆ ಉತ್ತರ ಕೊಡುವುದು ಎಂದು ಆರ್ ಅಶೋಕ್ ವಾಗ್ದಾಳು ನಡೆಸಿದ್ದಾರೆ.

ಇದೇ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ನೀವೇ ಈ ರೀತಿಯಾದಂತಹ ಘಟನೆಗಳನ್ನು ಮಾಡಿಸಿರಬಹುದು ಎಂದರು. ಇದಕ್ಕೆ ಜಮೀರ್ ಕೂಡ ಉತ್ತರಿಸಿ, ಯಾರೇ ಘೋಷಣೆ ಕೂಗಿದರೂ ತಪ್ಪೆ. ದೇಶ ದ್ರೋಹಿಗಳೇ. ಈ ವಿಚಾರದಲ್ಲಿ ಎರಡು ಮಾತಿಲ್ಲ. ಬಿಜೆಪಿಯವರಿಗೆ ವಿಷಯಗಳೇ ಇಲ್ಲ. ಹಾಗಾಗಿ ಇದನ್ನು ಇಟ್ಟುಕೊಂಡು ಸಿಎಂ ರಾಜೀನಾಮೆ ವಿಚಾರವನ್ನು ಮಾತನಾಡುತ್ತಾರೆ‌. ನಿನ್ನೆ ವೇರೆ ಅವರಿಗೆ ಮುಖಭಂಗವಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *