ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಲಿಂಖೀಪುರ ಖೇರಿ ಹಿಂಸಾಚಾರಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪತ್ರ ಬರೆದಿದ್ದಾರೆ.

प्रधानमंत्री जी,
अगर देश के किसानों के प्रति आपकी नीयत सचमुच साफ है, तो आज अपने केंद्रीय गृह राज्य मंत्री अजय मिश्र टेनी के साथ डीजीपी कांफ्रेंस में मंच पर विराजमान मत होइए, उनको बर्ख़ास्त कीजिए।
कांग्रेस महासचिव श्रीमती @priyankagandhi का पीएम मोदी को पत्र। pic.twitter.com/dVNoGSMski
— Congress (@INCIndia) November 20, 2021
ಈ ಸಂಬಂಧ ಮಾತನಾಡಿದ ಪ್ರಿಯಾಂಕ ಗಾಂಧಿ, ಹಿಂಸಾಚಾರದಲ್ಲಿ ಮೃತರ ಕುಟುಂಬಸ್ಥರಿಗೆ ನ್ಯಾಯ ಕೊಡಿಸಬೇಕು. ಯಾಕಂದ್ರೆ ಈ ಘಟನೆಯಲ್ಲಿ ರೈತರಿಗೆ ಕಾರು ಗುದ್ದಿಸಿದ್ದು ಕೇಂದ್ರ ಗೃಹ ಸಚಿವರ ಮಗ. ಉತ್ತರ ಪ್ರದೇಶದ ಸರ್ಕಾರವೂ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಒಳಗಾಗಿದೆ. ಹೀಗಾಗಿ ಮೃತರ ಕುಟುಂಬಸ್ಥರಿಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು.

ಈ ಹಿನ್ನೆಲೆ ಲಕ್ನೋದಲ್ಲಿ ನಡೆಯುವ ಡಿಜಿಪಿ ಮತ್ತು ಐಜಿಪಿ ಸಭೆಯಲ್ಲಿ ಮೋದಿ ಭಾಗವಹಿಸಬಾರದು. ರೈತರ ಬಗ್ಗೆ ಮೋದಿಗೆ ನಿಜವಾಗಿಯೂ ಗೌರವವಿದ್ದರೆ ಲಂಖೀಪುರದಲ್ಲಿ ನಡೆಯುವ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ಜೊತೆಗೆ ವೇದಿಕೆ ಹಂಚಿಕೊಳ್ಳಬಾರದು. ಕೇಂದ್ರ ಗೃಹ ಸಚಿವರಾಗಿ ಅಜಯ್ ಮಿಶ್ರಾ ಮುಂದುವರೆದರೆ ರೈತರ ಕುಟುಂಬಗಳಿಗೆ ನ್ಯಾಯ ಸಿಗಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

