Maharashtra political: ಮುಂಬೈಗೆ ಆಗಮಿಸಿದ ಪ್ರಿಯಾಂಕ ಗಾಂಧಿ..!

suddionenews
0 Min Read

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಉದ್ಧವ್ ಠಾಕ್ರೆ ಸರ್ಕಾರ ಬೀಳುವ ಹಂತದಲ್ಲಿದೆ. ಈ ಸಂಬಂಧ ನಿನ್ನೆ ಉದ್ಧವ್ ಠಾಕ್ರೆ ಭಾವನಾತ್ಮಕವಾಗಿ ಪತ್ರವನ್ನು ಬರೆದಿದ್ದರು. ನಮ್ಮ ಯಾರೊಬ್ಬ ಶಾಸಕರು ನೀವೂ ನಮಗೆ ಬೇಡವೆಂದರೆ ಈಗಲೇ ರಾಜೀನಾಮೆ ನೀಡುತ್ತೇನೆ. ಆದರೆ ಅವರನ್ನು ಭಯಗೊಳಿಸುತ್ತಿದ್ದಾರೆ ಎಂದಿದ್ದರು.

ಈ ಎಲ್ಲಾ ಬೆಳವಣಿಗೆಯ ನಡುವೆ ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಹಾರಾಷ್ಟ್ರದ ಮುಂಬೈ ತಲುಪಿದ್ದಾರೆ. ಈ ಪ್ರವಾಸದ ಬಗ್ಗೆ ಹಲವು ಊಹಾಪೋಹಗಳು ಎದ್ದಿವೆ. ಶಿವಸೇನೆಯ ಹಲವು ಸಂಸದರೂ ಬಂಡಾಯವೆದ್ದಿದ್ದಾರೆ ಎಂಬ ಸುದ್ದಿಯೂ ಇದೆ. ಈ ಮಧ್ಯೆ ಪ್ರಿಯಾಂಕ ಗಾಂಧಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *