ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಉತ್ತರ ಪ್ರದೇಶದ ಅಮೇಥಿಯಲ್ಲಿ ರ್ಯಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ಕೋವಿಡ್ ಅಲೆಯಿಂದಾಗಿ ಮತ್ತು ಬೆಲೆ ಏರಿಕೆಯಿಂದಾಗಿ ಜನ ಸಾವನ್ನಪ್ಪುತ್ತಿದ್ದಾರೆ. ಬಿಜೆಪಿ ಕೊರೊನಾ ಟೈಮ್ ನಲ್ಲಿ ಏನು ಮಾಡಿದೆ. ಆಕ್ಸಿಜನ್ ಕೊರತೆಗೆ ಪಕ್ಷವೇ ಕಾರಣವೇ ಆಗಿತ್ತು. ವೈದ್ಯಕೀಯ ಚಿಕಿತ್ಸೆಯ ಕೊರತೆಯೂ ಆಗಿತ್ತು ಎಂದು ಕಿಡಿಕಾರಿದ್ದಾರೆ.
74 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂಬ ಪ್ರಶ್ನೆಗೆ ತಿರುಗೇಟು ನೀಡಿದ್ದು, ಈ ಏಳು ವರ್ಷಗಳಲ್ಲಿ ಅಮೇಥಿಯಲ್ಲಿ ಬಿಜೆಪಿ ಏನು ಮಾಡಿದೆ..? ಬಿಜೆಪಿ ಪರವಾಗಿ ಏಕಪಕ್ಷೀಯ ಅಭಿವೃದ್ಧಿ ಮಾತ್ರ ನಡೆದಿದೆ ಮತ್ತು ಬೆಲೆ ಏರಿಕೆಯಿಂದ ಜನರು ಕಷ್ಟಪಡುತ್ತಿದ್ದಾರೆ. ಇದೇ ವೇಳೆ ಲಿಂಖಿಪುರ ಖೇರಿ ಗ್ರಾಮದ ರೈತರ ಸಾವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.