ನವದೆಹಲಿ: ರೈತ ವಿರೋಧಿ ಕೃಷಿ ಕಾನೂನುಗಳನ್ನ ಹಿಂಪಡೆಯುವಂತೆ ನಡೆಸಿದ ಹೋರಾಟಕ್ಕೆ ಇಂದಿಗೂ ಒಂದು ವರ್ಷ. ಆ ದಿನವನ್ನ ನೆನೆದಿರುವ ಪ್ರಿಯಾಂಕ ಗಾಂಧಿ ವಾದ್ರಾ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರೈತರ ಸತ್ಯಾಗ್ರಹಕ್ಕೆ ಒಂದು ವರ್ಷವಾಗಿದೆ. ರೈತರ ಚಳುವಳಿ, ಹುತಾತ್ಮರಾದ 700 ಜನ ರೈತರ ತ್ಯಾಗವನ್ನ ನೆನಪಿಸುತ್ತಿದೆ. ಬಿಜೆಪಿ ಸರ್ಕಾರ, ದುರಂಕಾರ ಮತ್ತು ಅನ್ನದಾತರ ಮೇಲಿನ ದೌರ್ಜನ್ಯಕ್ಕೆ ಹೆಸರುವಾಸಿಯಾಗಲಿದೆ. ರೈತರ ಮೆರಗು ಭಾರತದಲ್ಲಿ ಇತ್ತು. ಮುಂದೆ ಇರುತ್ತದೆ ಕೂಡ. ಅದಕ್ಕೆ ಸಾಕ್ಷಿ ಅವರಿಗೆ ಸಿಕ್ಕ ಜಯ. ಜೈ ಕಿಸಾನ್ ಎಂಬ ಘೋಷಣೆಯೊಂದಿಗೆ ಟ್ವೀಟ್ ಮಾಡಿದ್ದಾರೆ.
ರೈತರು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನ ವಿರೋಧಿಸಿ ಒಂದು ವರ್ಷಗಳ ಕಾಲ ಪ್ರತಿಭಟನೆ ನಡೆಸಿದ್ರು. ಆದ್ರೆ ಕೇಂದ್ರ ಸರ್ಕಾರ ಯಾವುದಕ್ಕೂ ಮಣಿದಿರಲಿಲ್ಲ. ಇತ್ತೀಚೆಗಷ್ಟೇ ಆ ಮೂರು ಕಾಯ್ದೆಗಳನ್ನ ವಾಪಾಸ್ ಪಡೆಯುತ್ತೇವೆಂದು ಹೇಳಿಕೆ ನೀಡಿದೆ. ಆದ್ರೆ ಹೋರಾಟದಲ್ಲಿ ಮಣಿದ 700 ರೈತರನ್ನ ನೆನೆದ ಪ್ರಿಯಾಂಕ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.