ಲಕ್ನೋ: ಚುನಾವಣೆ ಬಂತು ಅಂದ್ರೆ ಸಾಕು ರಾಜಕೀಯ ನಾಯಕರು ಟೆಂಪಲ್ ರನ್ ಶುರು ಮಾಡಿಕೊಳ್ಳುತ್ತಾರೆ. ಈ ಬಾರಿ ನಮ್ಮನ್ನೇ ಗೆಲ್ಸಪ್ಪ ಅಂತ ಬೇಡಿಕೆ ಇಡ್ತಾರೆ. ಇದು ಹೊಸದೇನು ಅಲ್ಲ.. ಅಥವಾ ಒಂದೇ ಪಕ್ಷಕ್ಕೆ ಸೀಮಿತವಾದದ್ದು ಅಲ್ಲ. ಇದೀಗ ಉತ್ತರಪ್ರದೇಶದಲ್ಲಿ ಚುನಾವಣಾ ಬಿಸಿ ಜೋರಾಗಿಯೇ ಇದೆ. ಫೆಬ್ರವರಿ 10ಕ್ಕೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ನಾಯಕರು ಉತ್ತರಪ್ರದೇಶ ಗೆಲ್ಲುವ ಹಠಕ್ಕೆ ಬಿದ್ದಿದ್ದಾರೆ.
ಈ ಬಾರಿ ಬಿಜೆಪಿಗೆ ಮಣ್ಣು ಮುಕ್ಕಿಸಲೇ ಬೇಕೆಂದು ಸ್ಥಳೀಯ ಪಕ್ಷಗಳು ಸೇರಿದಂತೆ ಕಾಂಗ್ರೆಸ್ ಪಕ್ಷ ಕೂಡ ಪಣತೊಟ್ಟಿದೆ. ಅದರಂತೆ ಯುಪಿ ಫುಲ್ ಜವಬ್ದಾರಿಯನ್ನ ಪ್ರಿಯಾಂಕಾ ಗಾಂಧಿ ಹೊತ್ತಿದ್ದಾರೆ. ಈ ಹಿನ್ನೆಲೆ ಪ್ರಿಯಾಂಕಾ ಗಾಂಧಿ ಇದೀಗ ಕಾಳಿ ಮೊರೆ ಹೋಗಿದ್ದಾರೆ.
ನೊಯ್ಡಾದ ಕಾಳಿಮಾತಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಿಯಾಂಕ ಗಾಂಧಿಯವ ಈ ನಡೆ ಕೆಲವರಿಗೆ ಇದು ಹೊಸ ಸ್ಟಾಟರ್ಜಿ ಎನಿಸಿದೆ. ಯಾಕಂದ್ರೆ ನೊಯ್ಡಾದಲ್ಲಿ 3 ಲಕ್ಷದಷ್ಟು ಬಂಗಾಳಿ ಭಾಷೆಯವರಿದ್ದಾರೆ. ಪ್ರಿಯಾಂಕ ಗಾಂಧಿ ಈಗಾಗಲೇ ಬಂಗಾಳಿ ಭಾಷೆಯವರಿಗೂ ಟಿಕೆಟ್ ಕೊಟ್ಟಿರುವ ಕಾರಣ, ಇದು ಪ್ತಚಾರದ ಗಿಮಿಕ್ ಎನ್ನಲಾಗುತ್ತಿದೆ.
ಇನ್ನು ಉತ್ತರ ಪ್ರದೇಶದಲ್ಲಿ ಬಿಜೆಪಿಯೇ ಈ ಬಾರಿಯೂ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿ ನಾಯಕರು ಕೂಡ ಟೆಂಪಲ್ ರನ್ ಶುರು ಮಾಡಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಪ್ರಧಾನಿ ಮೋದಿ ಕಾಶಿ ವಿಶ್ವನಾಥನಿಗೆ ನಮಿಸಿ ಗಮನ ಸೆಳೆದಿದ್ದರು. ಇದೀಗ ಉತ್ತರಪ್ರದೇಶದ ಕೌಶಂಬಿಯಲ್ಲಿ ಹಳೆಯ ಶಿವನ ದೇವಾಲಯವಿದೆ. ಅಲ್ಲಿ ಬಿಜೆಪಿ ಗೆಲ್ಲಲಿ ಎಂದು ನಿತ್ಯವೂ ಪೂಜೆ ಸಲ್ಲಿಸುತ್ತಿದ್ದಾರಂತೆ.