ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಪ್ರಿಯಾಂಕ್ ಖರ್ಗೆ : ಕಾರಣವೇನು ಗೊತ್ತಾ..?

1 Min Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಹಕವು ವಿದ್ಯಾಮಾನಗಳು ನಡೆಯುತ್ತಲೆ ಇದಾವೆ. ಇಂದು ಪ್ರಿಯಾಂಕ್ ಖರ್ಗೆ, ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಪ್ರಿಯಾಂಕ್ ಖರ್ಗೆ ಹಾಗೂ ಡಿಸಿಎಮನ ಡಿಕೆ ಶಿವಕುಮಾರ್ ಕೂತು ಮಾತನಾಡಿದ್ದಾರೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು ಡಿಕೆ ಮನೆಯಲ್ಲಿ ಬ್ರೇಕ್ ಫಾಸ್ಟ್ ಮುಗಿಸಿ ಹೋಗಿದ್ದರು. ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಭೇಟಿ ಸಹಜವಾಗಿಯೇ ಆಶ್ಚರ್ಯವನ್ನುಂಟು ಮಾಡಿದೆ.

ಪ್ರಿಯಾಂಕ್ ಖರ್ಗೆ ಸದಾಶಿವನಗರ ಮನೆಗೆ ಬಂದೊಡನೆ ಡಿಕೆ ಸುರೇಶ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿರುವ ಕಾರಣ ಡಿಕೆ ಶಿವಕುಮಾರ್ ಮನೆಯತ್ತ ಕೂಡ ಎಲ್ಲರ ಚಿತ್ತ ನೆಟ್ಟಿದೆ. ಡಿಕೆ ಶಿವಕುಮಾರ್ ಯಾರನ್ನೆಲ್ಲ ಭೇಟಿಯಾಗ್ತಾ ಇದ್ದಾರೆ ಎಂಬುದು ಬಹಳ ಮುಖ್ಯವಾಗುತ್ತದೆ. ನಿನ್ನೆ ರಾತ್ರಿಯಷ್ಟೇ ಸತೀಶ್ ಜಾರಕಿಹೊಳಿ ಕೂಡ ಡಿಕೆ ಶಿವಕುಮಾರ್ ಅವರನ್ನು ಖಾಸಗಿ ಸ್ಥಳದಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು ಪ್ರಿಯಾಂಕ್ ಖರ್ಗೆ ಅವರು ಮಾತುಕತೆಯ ಬಳಿಕ ಡಿಕೆ ಶಿವಕುಮಾರ್ ಅವರ ಮನೆಯಿಂದ ಹೊರಗೆ ಬರಲಾಗಿದೆ‌. ತಕ್ಷಣ ಮಾಧ್ಯಮದವರೆಲ್ಲ ಭೇಟಿಯ ಬಗ್ಗೆ ವಿಚಾರವನ್ನ ಕೇಳಲಾಗಿದೆ. ಆದರೂ ಪ್ರಿಯಾಂಕ್ ಖರ್ಗೆ ಮಾತನಾಡಿಲ್ಲ. ಒಳಗಿನ ಗುಟ್ಟು ಬಿಟ್ಟುಕೊಡಲಿಲ್ಲ. ಬದಲಿಗೆ ದಯವಿಟ್ಟು ಕ್ಷಮಿಸಿ, ಸಿಎಂ ಅವರು ಆಗಲೇ ಬಂದು ಕೂತಿದ್ದಾರೆ ಅಂತ ಹೇಳಿ ಅಲ್ಲಿಂದ ಹೊರ ನಡೆದಿದ್ದಾರೆ. ಬಳಿಕ ಡಿಕೆ ಸುರೇಶ್ ಅವರು ಕೂಡ ಅಲ್ಲಿಂದ ಹೊರಟಿದ್ದಾರೆ. ಒಗ್ಗಟ್ಟಿನ ಮಂತ್ರವನ್ನೇನೋ ಜಪಿಸಿದ್ದಾರೆ. ಆದರೆ ಬೆಳವಣಿಗೆ ನೋಡ್ತಾ ಇದ್ದರೆ ಸಿಎಂ ಕುರ್ಚಿ ಕದನ ಮತ್ತೆ ಸದ್ದು ಮಾಡುವ ಸಾಧ್ಯತೆಯೂ ಇದೆ.

Share This Article