ಬೆಂಗಳೂರು: ನಾಮಕವಸ್ಥೆಗಷ್ಟೇ ಜೈಲುವಾಸ ಅನ್ನೋ ಹಾಗೇ ಕೆಲವೊಂದಿಷ್ಟು ಕೈದಿಗಳು ಜೈಲಿನಲ್ಲೂ ರಾಯಲ್ ಲೈಫ್ ಲೀಡ್ ಮಾಡ್ತಾ ಇದ್ದಾರೆ.ಆ ಸಂಬಂಧ ಫೋಟೋ, ವಿಡಿಯೋಗಳು ವೈರಲ್ ಆಗುತ್ತಿವೆ. ಇದಕ್ಕೆ ಜನರ ವಿರೋಧವು ಇದೆ. ಈ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಪರಮೇಶ್ವರ್ ಅವರು, ಈ ಹಿಂದೆ ಮಂಗಳೂರು, ಬೆಳಗಾವಿಯ ಜೈಲುಗಳಲ್ಲಿ ಈ ರೀತಿ ಆಗಿದ್ದಾಗ ಅಧಿಕಾರಿಗಳನ್ನು ಶ್ಪೆಂಡ್ ಮಾಡಿ ಕ್ರಮ ತೆಗೆದುಕೊಂಡಿದ್ದೇವೆ. ಎಡಿಜಿಪಿ ಬಿ.ದಯಾನಂದ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿದ್ದೇವೆ. ಅವರು ನಿನ್ನೆ ರಜೆ ಇದ್ದರು. ಈ ಬಗ್ಗೆ ಅವರ ಬಳಿ ಮಾತನಾಡಿದ್ದೇನೆ. ಕೆಳ ಅಧಿಕಾರಿಗಳ ಮೇಲೆ ತಕ್ಷಣ ಕ್ರಮ ತೆಗೆದುಕೊಂಡು ವರದಿ ಕೊಡಬೇಕು ಎಂದಿದ್ದೇನೆ.
ಸಿಬ್ಬಂದಿ ಕಡಿಮೆ ಎನ್ನುತ್ತಾರೆ. ಆದರೆ ಇರುವಂತಹ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು ಅಲ್ವಾ..? ಸ್ಟಾಪ್ ಕಡಿಮೆ ಇದ್ದಾರೆ ಎಂದು ಜೈಲಿನಲ್ಲಿದ್ದವರಿಗೆ ಮೊಬೈಕ್, ಟಿವಿ ಸೇರಿ ಬೇರೆ ಬೇರೆ ಕೊಟ್ಟೃ ಅದು ಜೈಲು ಎಂದು ಎನಿಸಿಕೊಳ್ಳಲ್ಲ. ಈಗಾಗಲೇ ಈ ಸಂಬಂಧ ವರದಿಯನ್ನು ಕೇಳಿದ್ದೇನೆ. ಶೀಘ್ರದಲ್ಲಿಯೇ ಒಂದು ಸಭೆ ಮಾಡುತ್ತೇನೆ. ಇದಕ್ಕೆಲ್ಲಾ ಏನು ಮಾಡಬೇಕು ಎಂದು ಚರ್ಚೆ ಮಾಡಲಾಗುವುದಹ. ಜಾಮರ್ ಇದ್ದರು ಈ ರೀತಿ ಆಗುತ್ತವೆ. ವರದಿ ಕೊಡಿ ಎಂದು ಕೇಳಿದ್ದೇನೆ. ವರದು ನನಗೆ ಸರಿ ಅನ್ನಿಸಲಿಲ್ಲ ಎಂದರೆ ಸಮಿತಿ ರಚನೆ ಮಾಡಿ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು. ಉಗ್ರನ ಕೈಯಲ್ಲಿ ಮೊಬೈಲ್ ಇದೆ ಎಂದಿದ್ದಕ್ಕೆ ಉತ್ತರಿಸಿದ ಗೃಹ ಸಚಿವರು, ಉಗ್ರ ಅಂತಲ್ಲ, ಜೈಲಿನಲ್ಲಿ ಇರುವ ಯಾರ ಬಳಿಯೂ ಮೊಬೈಲ್ ಇರಲೇಬಾರದು ಎಂದು ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.






