Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಮಾನ್ಯೀಕರಣದ ನಂತರ ನೋಟುಗಳ ಮುದ್ರಣ ಗುಣಮಟ್ಟ ಕಡಿಮೆಯಾಗಿದೆ : ಆರ್.ಬಿ.ಐ. ಗೆ ಪತ್ರ ಬರೆದ ಭೀಮಸಮುದ್ರದ ಎಂ. ವೇದಮೂರ್ತಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 24 :
ಭಾರತೀಯ ರಿಸರ್ವ್ ಬ್ಯಾಂಕು ಇಡೀ ಕರ್ನಾಟಕ ರಾಜ್ಯದಲ್ಲಿ ಹೊಸ ನೋಟುಗಳು ಮತ್ತು ನಾಣ್ಯಗಳ ನ್ಯಾಯಯುತ ವಿತರಣೆಯನ್ನು ಮಾಡುತ್ತಿದೆ. ಕರ್ನಾಟಕದ ಎಲ್ಲ ಬ್ಯಾಂಕು ಶಾಖೆಗಳಲ್ಲಿ ಎಲ್ಲ ನೋಟುಗಳು ಸೂಕ್ತ ಪ್ರಮಾಣದಲ್ಲಿ ಲಭ್ಯವಿವೆ ಎಲ್ಲ ಬ್ಯಾಂಕುಗಳೂ ಕೊಳೆಯಾದ/ ಹರಿದ/ದೋಷಪೂರಿತ ನೋಟುಗಳನ್ನು ಬದಲಿಸಿಕೊಡುವ ಸೌಲಭ್ಯ ನೀಡುತ್ತದೆ. ಮತ್ತು ನೋಟು ಮತ್ತು ನಾಣ್ಯಗಳನ್ನು ವ್ಯವಹಾರಗಳಿಗಾಗಿ / ವಿನಿಮಯಕ್ಕಾಗಿ ಸ್ವೀಕರಿಸುತ್ತದೆ. ಆದ್ದರಿಂದ ನೀವು ನಿಮ್ಮ ಅಗತ್ಯಗಳಿಗಾಗಿ ಯಾವುದೇ ಬ್ಯಾಂಕು ಶಾಖೆಯನ್ನು ಸಂಪರ್ಕಿಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದ ತುರೇಬೈಲಿನ ವೇದಮೂರ್ತಿ (ಮೊಬೈಲ್ ಸಂಖ್ಯೆ : 9880836505, 8088076203) ಎಂಬುವವರು ಗವರ್ನರ್ ಆರ್.ಬಿ.ಐ.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನವ ದೆಹಲಿ ಇಲ್ಲಿಗೆ ಪತ್ರವನ್ನು ಬರೆದು ಡಿ ಮಾನಿಟೈಸ್ ಆದ ಮೇಲೆ ನೋಟ್‍ಗಳ ಮುದ್ರಣ ಗುಣಮಟ್ಟ ಕಡಿಮೆ ಇರುವುದರಿಂದ ಚಲಾವಣೆ ಮಾಡಲು ತುಂಬಾ ಕಷ್ಟಕರವಾಗಿದೆ. 10, 20, 50, ರೂಪಾಯಿಗಳ ನೋಟುಗಳ ಮುಖಬೆಲೆಯ ಕಡಿಮೆ ಇರುವುದರಿಂದ ಜನರ ಜೇಬಿನಲ್ಲಿ ಇಟ್ಟರೆ ನೋಟುಗಳು ಹರಿದುಹೋಗುವ ಸಂಭವವೇ ಹೆಚ್ಚು ಮತ್ತು ಕಿರಾಣಿ ಅಂಗಡಿಗಳಲ್ಲಿ ನನ್ನ ಅನುಭವದ ಪ್ರಕಾರ ಇದ್ದು ಸುಮಾರು 10 ವರ್ಷ ದಿಂದ ನೋಟುಗಳನ್ನು ನೋಡುತ್ತಾ ಬರಲಾಗಿದೆ. 2018ರಿಂದ ಡಿ ಮಾನಿಟೈಸ್ ಬಳಿಕ ಈ ಮುಖಬೆಲೆಯ ನೋಟುಗಳು ಕಿರಾಣಿ ಅಂಗಡಿಗಳಲ್ಲಿ ಈ ನೋಟುಗಳನ್ನು ತೆಗೆದುಕೊಳ್ಳಲು ಕಿರಿ ಕಿರಿ ಅನುಭವಿಸುವ ಪರಿಸ್ಥಿತಿ ಬಂದಿದೆ. ಜನರ ಕೈಯಿಂದ ಕೈಗೆ ಹೋಗಿ ಅದರ ಗುಣಮಟ್ಟ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಈ ನೋಟುಗಳ ಮದ್ರಣ ಲೋಪದೋಷವನ್ನು ವ್ಯವಸ್ಥಾಪಕರು ಗಮನಹರಿಸಬೇಕು.

ಗ್ರಾಮೀಣ ಪ್ರದೇಶದಲ್ಲಿ ಜನರು 10, 20, 50 ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಬಳಸುತ್ತಾರೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ಅಂಗಡಿಯವರು ಸಂತೆ ವ್ಯಾಪಾರಸ್ಥರು ಹಿಟ್ಟಿನ ಗಿರಿಣಿ ತರಕಾರಿ ವ್ಯಾಪಾರ ಈ ನೋಟುಗಳನ್ನು ಹೆಚ್ಚು ಬಳಸುತ್ತಾರೆ. ನೋಟುಗಳ ಗುಣಮಟ್ಟ ಕಡಿಮೆ ಇರುವುದರಿಂದ ಇದನ್ನು ಸಂಗ್ರಹಣೆ ಮಾಡುವುದು ತುಂಬಾ ಕಷ್ಟ ಅದರ ಮೇಲೆ ಸ್ವಲ್ಪ ನೀರಿನ ತೇವಾಂಶ ಬಿದ್ದರೂ ಆ ನೋಟುಗಳು ಚಲಾವಣೆಗೆ ಬರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಆ ನೋಟುಗಳು ಹರಿದ ಮೇಲೆ ಅದಕ್ಕೆ ಪ್ಲಾಸ್ಟರ್ ಗಮ್ಮು ಅಂಟಿಸಿ ವ್ಯಾಪಾರಿಗಳಿಗೆ ಅಥವಾ ಅಂಗಡಿಯವರಿಗೆ ತರುತ್ತಾರೆ. ಇದರಿಂದ ದಿನನಿತ್ಯ ಕಿರಿಕಿರಿ ಅನುಭವಿಸುವ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ್ದರು.

ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕು ಉತ್ತರವನ್ನು ಬರೆದಿದ್ದು ಮೇಲಿನಂತೆ ತಿಳಿಸಿದ್ದು,  ಈ ವಿಷಯದಲ್ಲಿ ಏನಾದರೂ ನಿರ್ದಿಷ್ಟ ಕುಂದುಕೊರತೆ ಇದ್ದರೆ ಅಥವಾ ಸಂಬಂಧಿತ ಕುಂದುಕೊರತೆಯನ್ನು ಗ್ರಾಹಕರಿಗೆ ತೃಪ್ತಿಯಾಗುವಂತೆ ಪರಿಹರಿಸದಿದ್ದಲ್ಲಿ ಅಥವಾ ಬ್ಯಾಂಕು 30 ದಿನಗಳೊಳಗಾಗಿ ಉತ್ತರ ಕೊಡದಿದ್ದಲ್ಲಿ ನೀವು ಆರ್ ಬಿ ಐ ಲೋಕಪಾಲರನ್ನು ‘ ರಿಸರ್ವ್ ಬ್ಯಾಂಕು- ಏಕೀಕೃತ ಲೋಕಪಾಲ ಯೋಜನೆ-2021’ ರ ಅಡಿಯಲ್ಲಿ ಸಂಪರ್ಕಿಸಬಹುದು. ಎಂದು ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!