ಇತ್ತಿಚೆಗೆ ದೆಹಲಿ ಸಿಎಂ ಅರವಿಂ ದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ಬಳಿ ಮನವಿಯೊಂದನ್ನು ಮಾಡಿದ್ದರು. ಹಣದ ನೋಟಿನ ಮೇಲೆ ಒಂದು ಕಡೆ ಗಾಂಧೀಜಿ ಮತ್ತೊಂದು ಕಡೆ ಗಣೇಶ ಮತ್ತು ಲಕ್ಷ್ಮೀಯನ್ನು ಮುದ್ರಿಸಿ ಎಂದು ಮನವಿ ಮಾಡಿದ್ದರು. ಇದರ ಬೆನ್ನಲ್ಲೆ ಇದೀಗ ಪ್ರಧಾನಿ ಮೋದಿ ಫೋಟೋ ಪ್ರಕಟಿಸುವಂತೆ ಒತ್ತಡಗಳು ಕೇಳಿ ಬರುತ್ತಿದೆ.
ಬಿಜೆಪಿ ಶಾಸಕ ರಾಮ್ ಕದಮ್ ಅವರು, ಭಾರತದ ನೋಟುಗಳಲ್ಲಿ ಪ್ರಧಾನಿ ಮೋದಿ ಅವರ ಫೋಟೋಗಳನ್ನು ಪ್ರಕಟಿಸುವಂತೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್, ಶಿವಾಜಿ, ವಿನಾಯಕ್ ದಾಮೋದರ್ ಸಾವರ್ಕರ್ ಅವರ ಫೋಟೋಗಳನ್ನು ಸೇರಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಇದರ ನಡುವೆ ಬಿಜೆಪಿ ನಾಯಕ ನಿತೇಶ್ ರಾಣೆ ಅದಾಗಲೇ 200 ರೂಪಾಯಿ ನೋಟಿನ ಮೇಲೆ ಶಿವಾಜಿ ಅವರ ಫೋಟೋ ಎಡಿಟ್ ಮಾಡಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದು, ಇದು ಪರ್ಫೆಕ್ಟ್ ಎಂಬ ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ.
ಇನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಹೊಸ ನೋಟುಗಳ ಮೇಲೆ ಅಂಬೇಡ್ಕರ್ ಅವರ ಫೋಟೋಗಳನ್ನು ಏಕೆ ಮುದ್ರಿಸಬಾರದು ಎಂದು ಪ್ರಶ್ನಿಸಿದ್ದಾರೆ. ಹೀಗೆ ಸಾಲು ಸಾಲು ಸಲಹೆಗಳು ಬರುತ್ತಿದ್ದು, ಹೊಸ ನೋಟಿನ ಮೇಲೆ ಯಾರ ಫೋಟೋ ಮುದ್ರಣವಾಗಬಹುದ ಎಂಬ ಕುತೂಹಲ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.