ನವದೆಹಲಿ: ಇಂದಿನಿಂದ ಸಂಸತ್ ವಿಶೇಷ ಅಧಿವೇಶನ ಆರಂಭವಾಗಲಿದೆ. ಸೆ.22ರವರೆಗೆ ಅಧಿವೇಶನ ನಡೆಯಲಿದೆ. ಪ್ರಮುಖ ನಾಲ್ಕು ಮಸೂದೆ ಮಂಡಿಸಲು ಕೇಂದ್ರದ ಪ್ಲ್ಯಾನ್ ನಡೆಸಿದೆ. ನಾಳೆಯಿಂದ ಹೊಸ ಸಂಸತ್ ನಲ್ಲಿ ಅಧಿವೇಶನ ನಡೆಯಲಿದೆ. ಅಧಿವೇಶನ ಆರಂಭಕ್ಕೂ ಮುನ್ನ ಮೋದಿ ಮಾತನ್ನಾಡಿದ್ದಾರೆ.
ಈ ವೇಳೆ ಚಂದ್ರಯಾನದ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿ20 ಯಶಸ್ಸಿನ ಬಗ್ಗೆಯೂ ಮೋದಿ ಮಾತನಾಡಿದ್ದಾರೆ. ಚಂದ್ರಯಾನ 3 ನಲ್ಲಿ ಚಂದ್ರನಲ್ಲಿ ನಮ್ಮ ತಿರಂಗವನ್ನು ಹಾರಿಸಲಾಗಿದೆ. ಶಿವಶಕ್ತಿ ಪಾಯಿಂಟ್ ಹೊಸ ಪ್ರೇರಣೆಯಾಗಿದೆ. ಭಾರತದ ಸಾಮರ್ಥ್ಯ ಈಗ ವಿಶ್ವಕ್ಕೆ ತಿಳಿದಿದೆ.
ನಾಳೆಯಿಂದ ಹೊಸ ಸಂಸತ್ ನಲ್ಲಿ ಕಲಾಪ ಆರಂಭ. ಯಶೋಭೂಮಿಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗಿದೆ. ಹೊಸ ಆತ್ಮವಿಶ್ವಾಸವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಚಂದ್ರಯಾನ ಯಶಸ್ವಿ ಬಳಿಕ ಭಾರತದತ್ತ ಎಲ್ಲರು ಗಮನ ಹರಿಸುತ್ತಿದ್ದಾರೆ. ದಕ್ಷಿಣ ಏಷ್ಯಾ ದೇಶಗಳಿಗೆ ಭಾರತ ಧ್ವನಿಯಾಗಿದೆ. 75 ವರ್ಷಗಳ ಬಳಿಕ ಹಾದಿ ಹೊಸ ಪ್ರೇರಣೆಯಾಗಲಿದೆ. 2047ಕ್ಕೆ ಅಭಿವೃದ್ಧಿ ಹೊಂದಿದ ದೇಶವಾಗಿಸಲು ಗುರಿ. ಐತಿಹಾಸಿಕ ನಿರ್ಣಯಗಳ ಸದನ ಇದಾಗಲಿದೆ ಎಂದಿದ್ದಾರೆ.