ಮುಂಬೈ: ನೂತನ ಸಂಸತ್ ಭವನ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಆದ್ರೆ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಮಾಡಿಸಲು ಮುಂದಾಗಿದ್ದು, ವಿರೋಧಕ್ಕೆ ಕಾರಣವಾಗಿದೆ. ಈ ಬಗ್ಗೆ ಆಕ್ರೋಶ ಹೊರ ಹಾಕಿರುವ TMC ಸಂಸದೆ ಮಹುವಾ ಮೊಹಿತ್ರಾ, ಇದೇನು ಪ್ರಧಾನಿಮೋದಿಯವರ ಮನೆಯ ಗೃಹ ಪ್ರವೇಶವಾ ಎಂದು ಪ್ರಶ್ನಿಸಿದ್ದಾರೆ.
ಮೇ 28ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಆದ್ರೆ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರಿಗೇನೆ ಆಹ್ವಾನ ನೀಡಿಲ್ಲ. ಇದು ವಿರೋಧಕ್ಕೆ ಕಾರಣವಾಗಿದೆ. ಈ ಸಂಬಂಧ ಟಿಎಂಸಿ ಸಂಸದೆ ಟೀಕೆ ಮಾಡಿದ್ದಾರೆ. ಸರ್ಕಾರವೂ ಸಾಂವಿಧಾನಿಕ ನಿಯಮಗಳ ಬಗ್ಗೆ ಅಜ್ಞಾನ ಹೊಂದಿದೆ. ಹೀಗಾಗಿ ಟಿಎಂಸಿ ಹಾಜರಾಗುವುದಿಲ್ಲ. ಪ್ರಾಶಸ್ತ್ಯದ ಪ್ರಕಾರ ಭಾರತದ ರಾಷ್ಟ್ರಪತಿಗಳು ಮೊದಲಿಗರಾಗಿದ್ದಾರೆ. ನಂತರ ಉಪರಾಷ್ಟ್ರಪತಿ ಆಮೇಲೆ ಪ್ರಧಾನಿ ಮೋದಿ ಅವರು.
ಇದು ಮೋದಿಜಿ ಸ್ವಂತ ಹಣದಿಂದ ಕಟ್ಟಿದ ಗೃಹಪ್ರವೇಶದ ಕಾರ್ಯಕ್ರಮವಲ್ಲ. ಹೀಗಾಗಿ ಸಂಸತ್ ಭವನದ ಉದ್ಘಾಟನೆಗೆ ಮೇ 28ರಂದು ನಮ್ಮ ಪಕ್ಷ ಹಾಜರಾಗುವುದಿಲ್ಲ. ಸಾಂವಿಧಾನಿಕ ನಿಯಮಗಳ ಬಗ್ಗೆ ಸರ್ಕಾರಕ್ಕೆ ಗೌರವವಿಲ್ಲ. ಬಿಜೆಪಿಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.