ಇಂದು ಮಕರ ಸಂಕ್ರಾಂತಿ ಸಂಭ್ರಮ. ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಕೂಡ ಸಂಕ್ರಾಂತಿ ಸಡಗರದಲ್ಲಿ ಮುಳುಗೆದ್ದಿದ್ದಾರೆ. ಅದರಲ್ಲೂ ನಾಡಿನ ಜನತೆಗೆ ಸಂಕ್ರಾಂತಿ ಶುಭಾಶಯವನ್ನು ಕನ್ನಡದಲ್ಲಿಯೇ ತಿಳಿಸಿದ್ದಾರೆ. ಇದು ಎಲ್ಲರಿಗೂ ಖುಷಿ ತಂದಿದೆ. ಪ್ರಧಾನಿ ಮೋದಿ ಅವರ ಜೊತೆಗೆ ಸೆಲೆಬ್ರೆಟಿಗಳು ಕೂಡ ಕೈಜೋಡಿಸಿದ್ದಾರೆ.
ಪ್ರಧಾನಿ ಮೋದಿ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಕೇಂದ್ರ ಸಚುವ ಕಿಶನ್ ರೆಡ್ಡಿ ಅವರು ಭಾಗಿಯಾಗಿದ್ದರು. ಈ ಮೂಲಕ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ನಟ, ನಟಿಯರು, ರಾಜಕೀಯ ಗಣ್ಯರು ಪಾಲ್ಗೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿಯವರು ಹಾಗೂ ಮೆಗಾಸ್ಟಾರ್ ಚಿರಂಜೀವಿಯವರು ಅಕ್ಕ- ಪಕ್ಕವೇ ಕುಳಿತು ನೃತ್ಯ ಮಾಡುವುದನ್ನು ವೀಕ್ಷಣೆ ಮಾಡಿದರು. ಇದೇ ಮೊದಲ ಬಾರಿಗೆ ಮೋದಿಯವರ ಜೊತೆ ಚಿರಂಜೀವಿಯವರು ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಈ ಹಬ್ಬದಲ್ಲಿ ಹಲವು ವಿಶೇಷ ಆಚರಣೆಗಳನ್ನು ಆಚರಿಸಲಾಗುತ್ತದೆ. ಪೊಂಗಾಲ್ ಹಬ್ಬದ ದಿನ ಪ್ರಧಾನಿ ಮೋದಿ ಅವರು ನೂರಾರು ಜನರ ಸಮ್ಮುಖದಲ್ಲಿ ಬೋಗಿಗೆ ತುಪ್ಪ ಸುರಿದು ಆಚರಣೆ ಮಾಡಿದರು. ಎಲ್ಲರಿಗೂ ಒಳಿತನ್ನು ಬಯಸಿದರು. ಹಬ್ಬದ ವಿಶೇಷವಾಗಿ ಪ್ರಧಾನಿ ಮೋದಿಯವರು ಹಸುವಿಗೆ ಊಟ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿದರು. ಸಿಹಿ ತಿನಿಸು ಹಾಗೂ ಬಾಳೆ ಹಣ್ಣನ್ನು ಕೊಟ್ಟು ಗೋ ಪೂಜೆ ಮಾಡಿ ಆಶೀರ್ವಾದ ಪಡೆದರು. ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಪ್ರಧಾನ ಮಂತ್ರಿ ಮೋದಿ ಚಾಲನೆ ನೀಡಿದರು. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ನಟ ಚಿರಂಜೀವಿ ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು