ಪ್ರಧಾನಿ ಮೋದಿ ಸಹೋದರ ಚೇತರಿಕೆ : ಧನ್ಯವಾದ ಹೇಳಿದ ಪ್ರಹ್ಲಾದ್ ಮೋದಿ

ಮೈಸೂರು: ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದವರಿಗೂ ಗಾಯವಾಗಿತ್ತು. ಗಾಯಾಳುಗಳನ್ನು ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಎಲ್ಲರೂ ಚೇತರಿಸಿಕೊಂಡಿದ್ದು, ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ನಾನು ಮತ್ತು ನನ್ನ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುವಾಗ ಕಾರು ರಸ್ತೆ ವಿಭಜಕಕ್ಕೆ ಹೊಡೆದಿತ್ತು. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಕರ್ನಾಟಕ ಸರ್ಕಾರ, ಮುಖಂಡರು, ಜನತೆಗೂ ಧನ್ಯವಾದಗಳು. ಅಪಘಾತದ ನಂತರ ಕಮಾಂಡ್, ಪೊಲೀಸ್ ಸಿಬ್ಬಂದಿ ನಮ್ಮ ಜೊತೆಗೆ ಇದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಕರ್ನಾಟಕದ ಜನತೆ ಅನುಕಂಪ ತೋರಿಸಿದ್ದಾರೆ. ಅವರ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ.

ಇನ್ನು ಘಟನೆ ಬಗ್ಗೆ ಮಾತನಾಡಿರುವ ಪ್ರಹ್ಲಾದ್ ಮೋದಿ ಅವರು, ನಾವೂ ಎರಡು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಒಂದು ಕಾರಿನಲ್ಲಿ ನಾನು, ಮಗ, ಸೊಸೆ ಮತ್ತು ಕುಟುಂಬಸ್ಥರು ಇದ್ದೆವು. ಮತ್ತೊಂದು ಕಾರಿನಲ್ಲಿ ಮಗಳು, ಅಳಿಯ ಮತ್ತು ಕುಟುಂಬಸ್ಥರು ಇದ್ದರು. ಚಾಲಕನದ್ದೂ ತಪ್ಪಿಲ್ಲ. ಎಸ್ಕಾರ್ಟ್ ಇದ್ದ ಕಾರಣ ಫಾಸ್ಟ್ ಆಗಿ ಹೋಗುವುದಕ್ಕೆ ಅವಕಾಶವೂ ಇರಲಿಲ್ಲ. ಸೀಟ್ ಬೆಲ್ಟ್ ಕೂಡ ಹಾಕಿದ್ದೆವು. ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *