ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ | ಕನ್ನಡದಲ್ಲೇ ಭಾಷಣ ಆರಂಭಿಸಿ ಭರ್ಜರಿ ಭಾಷಣ

ಶಿವಮೊಗ್ಗ: ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದು, ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕರ್ನಾಟಕದಲ್ಲೂ ಮೋದಿ ಹವಾ ಜೋರಾಗಿದೆ. ಈಗಾಗಲೇ ಕಲಬುರ್ಗಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಇದೀಗ ಇಂದು ಶಿವಮೊಗ್ಗಕ್ಕೂ ಭೇಟಿ ನೀಡಿದ್ದಾರೆ‌. ಈ ವೇಳೆ ಡಾ. ಮಂಜುನಾಥ್ ಅವರು ಕೂಡ ವೇದಿಕೆ ಹಂಚಿಕೊಂಡಿದ್ದಾರೆ‌.

ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಪ್ರಧಾನಿ ಮೋದಿಯವರ ಬೃಹತ್ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬರುತ್ತಿದ್ದಂತೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ಪಡೆದಿರುವ ಡಾ. ಮಂಜುನಾಥ್ ಅವರು, ಮೋದಿ ಅವರಿಗೆ ಪೇಟ ಧರಿಸಿ, ಹಸ್ತಲಾಘವ ಮಾಡಿ, ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ನೋಡಲು ಲಕ್ಷಾಂತರ ಮಂದಿ ಬಂದಿದ್ದರು. ಅವರ ಭಾಷಣಕ್ಕೆ ಚಪ್ಪಾಳೆ ತಟ್ಟಿದರು.

ಇದೆ ವೇಳೆ ಕನ್ನಡಲ್ಲೇ ಭಾಷಣ ಆರಂಭಿಸಿದರು ಮತ್ತು ಶಕ್ತಿ ಸ್ವರೂಪಿಣಿ ಸಿಗಂದೂರು ಚೌಡೇಶ್ವರು ದೇವಿಗೆ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ಶ್ರದ್ಧಾಪೂರ್ವಕವಾಗಿ ನಮಿಸಿದರು. ನೆರೆದಿರುವ ಜನರ ಪ್ರೀತಿ, ಅವರ ಆಶೀರ್ವಾದ ಮತ್ತು ಬೆಂಬಲವನ್ನು ಗಮನಿಸಿದರೆ ಕರ್ನಾಟಕದಲ್ಲಿ ಈಗಾಗಲೇ ಬಿಜೆಪಿಗೆ ಜನರ ಸಮರ್ಥನೆ ಸಿಕ್ಕಿರುವುದದು ದೃಢವಾಗುತ್ತದೆ ಎಂದು ಮೋದಿ ಹೇಳಿದರು. ಇಡೀ ಮೈದಾನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ತುಳುಕುತ್ತಿರುವುದನ್ನು ತಾವು ಗಮನಿಸುತ್ತಿರುವುದಾಗಿ ಹೇಳಿದ ಪ್ರಧಾನಿ ಮೋದಿ, ಮತ್ತೊಂದೆಡೆ ಭ್ರಷ್ಟಾಚಾರ ಮತ್ತು ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿರುವ ಇಂಡಿ ಮೈತ್ರಿಕೂಟದ ನಿದ್ರೆ ಹಾರಿಹೋಗಿರುವುದು ಸಷ್ಟವಾಗುತ್ತಿದೆ ಎಂದರು. ವಿಶ್ವದ ಅತಿದೊಡ್ಡ ಪಕ್ಷವಾಗಿ ಬೆಳೆದಿರುವ ಬಿಜೆಪಿಯ ಜನಸಂಘದ ದಿನಗಳಲ್ಲಿ ಅದರ ನಾಯಕರನ್ನು ಯಾರೂ ಗುರುತಿಸದಂಥ ಸ್ಥಿತಿ ಇತ್ತು ಎಂದು ಪ್ರಧಾನಿ ಮೋದಿ ಹೇಳಿದರು.

ಮೋದಿ ಜೊತೆಗೆ ವೇದಿಕೆ ಹಂಚಿಕೊಂಡ್ರು ಡಾ.ಮಂಜುನಾಥ್

Share This Article
Leave a Comment

Leave a Reply

Your email address will not be published. Required fields are marked *