ತುಮಕೂರು: ಜಿಲ್ಲೆಯ ಶಿರಾ ರಸ್ತೆಯ ಬಾಲೇನಹಳ್ಳಿಯಲ್ಲಿ ಲಾರಿ ಮತ್ತು ಕ್ರೂಸರ್ ಮುಖಾ ಮುಖಿ ಡಿಕ್ಕಿಯಾಗಿ ಒಂಭತ್ತು ಮಂದಿ ಸಾವನ್ನಪ್ಪಿದ್ದರು. ಅದರಲ್ಲೂ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಮಗುವೊಂದು ಬದುಕುಳಿದು, ಅನಾಥವಾಗಿದೆ.
ಈ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಘಟನೆ ಸಂಬಂಧ ಟ್ವೀಟ್ ಮಾಡಿರುವ ಮೋದಿ, ತುಮಕೂರಿನಲ್ಲಿ ನಡೆದ ಘಟನೆಯೂ ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಪಿಎಂ ಫಂಡ್ ನಿಂದ ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ನೀಡುತ್ತೇನೆ. ಹಾಗೂ ಗಾಯಗೊಂಡವರಿಗೆ 50 ಸಾವಿರ ನೀಡುವುದಾಗಿ ಪರಿಹಾರ ಘೋಷಿಸಿದ್ದಾರೆ.
ಟೆಂಪೋ ಟ್ಯಾಕ್ಸ್ ನಲ್ಲಿ 14 ಜನ ಪ್ರಯಾಣ ಮಾಡುತ್ತಿದ್ದರು. ಆದರೆ ಬಾಲೇನಹಳ್ಳಿ ಬಳಿ ಟೆಂಪೋಗೆ ಅಡ್ಡ ಬಂದ ಲಾರಿ ಮತ್ತು ಟೆಂಪೋ ನಡುವೆ ಅಪಘಾತವಾಗಿದೆ. ಇದರ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿಗೆ ಗಂಭೀರ ಗಾಯವಾಗಿದೆ ಗಾಯಾಳುಗಳನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.