ಧರ್ಮಯುದ್ಧಕ್ಕೆ ನಾಂದಿ ಆಡುವಂತೆ ಪ್ರಧಾನಿ ಮೋದಿ ಕರೆ.. : ಬಿಜೆಪಿ ನಾಯಕರಿಗೆ ಶುರುವಾಯ್ತಾ ಗೊಂದಲ..?

ಕಲಬುರಗಿ: ಬಿಜೆಪಿ ಪಕ್ಷ ಹಿಂದುತ್ವದ ವಿಚಾರದ ಮೇಲೆ ಹೆಚ್ಚು ಫೋಕಸ್ ಮಾಡಿತ್ತು. ಆದರೆ ಇದೀಗ ಪ್ರಧಾನಿ ಮೋದಿ ಹೇಳಿರುವ ಕಿವಿ ಮಾತು ಬಿಜೆಪಿ ನಾಯಕರಿಗೆ ಗೊಂದಲ ಸೃಷ್ಟಿಸಿದೆ. ಇಷ್ಟು ದಿನ ಹಿಂದುತ್ವದ ವಿರುದ್ಧ ಜೋರು ಧ್ವನಿ ಎತ್ತುತ್ತಿದ್ದ ಬಿಜೆಪಿಗೆ ಧರ್ಮಯುದ್ಧ ಬೇಡ ಎಂದು ಸಲಹೆ ನೀಡಿದ್ದಾರೆ.

ಮತಗಳನ್ನು ನಿರೀಕ್ಷೆ ಮಾಡದೆ ಅಲ್ಪಸಂಖ್ಯಾತರನ್ನು ತಲುಪುವಂತೆ ಸೂಚನೆ ನೀಡಿದ್ದಾರೆ. ಎಲ್ಲಾ ಧರ್ಮದ ಮತದಾರರನ್ನು ತಲುಪುವಂತೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ವಿಶ್ವವಿದ್ಯಾಲಯಗಳು ಹಾಗೂ ಚರ್ಚ್ ಗಳಿಗೆ ಭೇಟಿ, ‌ನೀಡಿ ಆದರೆ ಆ ಭೇಟಿಯ ಹಿಂದೆ ಮತಗಳ ನಿರೀಕ್ಷೆ ಬೇಡ ಎಂದು ಕಿವಿ ಮಾತು ಹೇಳಿದ್ದಾರೆ.

ಜೊತೆಗೆ ಪ್ರಜ್ಞಾವಂತ, ಬುದ್ಧಿವಂತ, ವೃತ್ತಿಪರ ಮುಸ್ಲಿಂರನ್ನು ಭೇಟಿಯಾಗಿ. ಬೋಹ್ರಾ ಸಮುದಾಯದ ಜನರ ಸಂಪರ್ಕ ಬೆಳೆಸಿ. ಯಾವುದೇ ಸಮುದಾಯದ ವಿರುದ್ಧ ಟೀಕೆಗಳು ಬೇಡ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಅನಗತ್ಯವಾಗಿ ಸಿನಿಮಾಗಳ ಬಗ್ಗೆಯೂ ವಿವಾದ ಸೃಷ್ಟಿಸಬೇಡಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *