ಬೆಂಗಳೂರು: ಸರ್ಕಾರದ ಅಧೀನದಲ್ಲಿರುವ ದೇವಸ್ಥಾನಗಳನ್ನ ಮುಕ್ತಗೊಳಿಸಲು ಸರ್ಕಾರ ತೀರ್ಮಾನ ಮಾಡಿದೆ. ಆದ್ರೆ ಈ ನಿರ್ಧಾರಕ್ಕೆ ಅರ್ಚಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.
ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಚಕರ ಒಕ್ಕೂಟವೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿಯಾಗಿ ಅರ್ಚಕರ ಸಮೂಹಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ದೇಗುಲಗಳು ಸರ್ಕಾರದಿಂದ ಮುಕ್ತವಾದರೆ ನಮ್ಮ ಗತಿ ಏನು ಎಂಬುದು ಅರ್ಚಕರ ಚಿಂತೆಯಾಗಿದೆ. ದೇಗುಲಗಳನ್ನು ಮುಕ್ತಗೊಳಿಸಲು ಹೊರಟಿರುವ ಸರ್ಕಾರ ಅರ್ಚಕರ ಜೀವನದ ವಿಚಾರವಾಗಿ ತುಟಿ ಬಿಚ್ಚುತ್ತಿಲ್ಲ ಎಂಬ ಚಿಂತೆ ಅವರಿಗೆ ಕಾಡುತ್ತಿದೆ. ದೇವಾಲಯಗಳು ಮುಕ್ತವಾದರೆ ಅವುಗಳನ್ನ ನಿರ್ವಹಣೆ ಮಾಡುವವರು ಯಾರು. ಅರ್ಚಕರಿಗೆ ಮಾಸಿಕ ವೇತನ, ಖರ್ಚು, ಭತ್ಯೆಗಳನ್ನ ನೀಡುವವರು ಯಾರು ಎಂಬ ಪ್ರಶ್ನೆ ಅರ್ಚಕರನ್ನ ಕಾಡುತ್ತಿದೆ.