ಬೆಂಗಳೂರು: GST ಪರಿಷ್ಕರಣೆಯಾದ ಬೆನ್ನಲ್ಲೇ ಕೆಎಂಎಫ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆ ಮಾಡುವುದಕ್ಕೆ ನಿರ್ಧಾರ ಮಾಡಿದೆ. ಸೆಪ್ಟೆಂಬರ್ 22 ಅಂದ್ರೆ ಸೋಮವಾರದಿಂದಾನೇ ಕೆಲ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.
ನಂದಿನಿಯ ಹಾಲು, ಮೊಸರು, ತುಪ್ಪ, ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ. ಈ ಸಂಬಂಧ ಸೋಮವಾರದಿಂದಾನೇ ಹೊಸ ದರ ಜಾರಿಗೆ ಬರಲಿದೆ. ಕೇಂದ್ರದಿಂದ ಶೇಕಡ 12 ರಿಂದ 5ಕ್ಕೆ ಜಿಎಸ್ಟಿ ಕಡಿತ ಬೆನ್ನಲ್ಲೇ ಇತ್ತ ಕರ್ನಾಟಕದಲ್ಲಿ ಕೆಎಂಎಫ್ ತನ್ನ ನಂದಿನಿ ಹಾಲಿನ ಕೆಲ ಉತ್ಪನ್ನಗಳ ದರ ಇಳಿಕೆ ಮಾಡಿದೆ. ಯಾವುದರ ದರ ಎಷ್ಟು ಇಳಿಕೆ ಅನ್ನೋದು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ತುಪ್ಪ, ಬೆಣ್ಣೆ, ಮೊಸರು ಸೇರಿ ನಂದಿನಿ ಉತ್ಪನ್ನಗಳ ಮೇಲಿನ ಜಿಎಸ್ಟಿ ದರದಲ್ಲಿ ಗಣನೀಯ ಇಳಿಕೆ ಮಾಡಿರುವುದರಿಂದ ಸೋಮವಾರದಿಂದ ಮಾರಾಟ ಬೆಲೆಯೂ ಇಳಿಕರ ಆಗಲಿದೆ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಜಿಎಸ್ಟಿ ದರ ಇಳಿಕೆ ಮಾಡಿದ ಮೇಲೆ ಮೆಸರಿನ ದರ 4 ರೂಪಾಯಿ ಇಳಿಯುವ ನಿರೀಕ್ಷೆ ಇದೆ. 2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್ಟಿ ವಿಧಿಸಲಾಗಿತ್ತು. 2022ರಲ್ಲಿ ಜಿಎಸ್ಟಿಯನ್ನು ಶೇಕಡ 22ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚೆಗೆ ದೀಪಾವಳಿ ಹಬ್ಬಕ್ಕಾಗಿ ಪ್ರಧಾನಿ ಮೋದಿ ಅವರ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿದ್ದು, ಇದು ಸೆಪ್ಟೆಂವರ್ 22ರಿಂದ ಜಾರಿಗೆ ಬರಲಿದೆ. ಆ ಮೂಲಕ ಗ್ರಾಹಕರು ಭರ್ಜರಿ ಸಿಹಿ ಸುದ್ದಿ ಸಿಕ್ಕಂತಾಗಿದೆ. ಹಾಲು, ಮೊಸರಿನ ದರ ಒಂದೆರ ಸಮನೇ ಏರಿಕೆಯಾಗುತ್ತಿತ್ತು. ಸದ್ಯ ಇಳಿಕೆಯಾಗುತ್ತಿರುವ ಸುದ್ದಿ ಕೇಳಿ ಗ್ರಾಹಕರು ಖುಷಿಯಾಗಿದ್ದಾರೆ.


