Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

Presidential Polls: ಶರದ್ ಪವಾರ್ ವಿರುದ್ಧ ಮಮತಾ ಬ್ಯಾನರ್ಜಿ ಅಸಮಾಧಾನ: ಪ್ರತಿಪಕ್ಷಗಳ ಸಭೆಗೆ ಹೋಗದಿರಲು ನಿರ್ಧಾರ..!

Facebook
Twitter
Telegram
WhatsApp

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಪಕ್ಷಗಳ ಒಗ್ಗಟ್ಟಿಗೆ ದೊಡ್ಡ ಹಿನ್ನಡೆಯಾಗಿ, ವಿರೋಧ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕರೆದಿರುವ ಸಭೆಗೆ ಹೋಗದಿರಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನಿರ್ಧರಿಸಿದ್ದಾರೆ. ಮಮತಾ ಬ್ಯಾನರ್ಜಿ ಬದಲಿಗೆ, ಅವರ ಸೋದರಳಿಯ ಮತ್ತು ಹಿರಿಯ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ದೆಹಲಿಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನು ತೃಣಮೂಲ ಮೂಲಗಳು ವರದಿ ಮಾಡಿವೆ.

ಮಂಗಳವಾರ ನಡೆಯುವ ಸಭೆಗೆ ವಿರೋಧ ಪಕ್ಷಗಳ ನಾಯಕರಿಗೆ ಇ-ಮೇಲ್ ಮೂಲಕ ಪವಾರ್ ಆಹ್ವಾನ ಮಾಡಿದ್ದಾರೆ. ಆದರೆ ಆ ಪತ್ರದಲ್ಲಿ ಪವಾರ್ ಹೇಳಿಕೆ ತೃಣಮೂಲದ ಉನ್ನತ ನಾಯಕತ್ವಕ್ಕೆ ನೋವುಂಟು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಯಾಕೆಂದರೆ ಇದಕ್ಕೂ ಮುನ್ನ ಮಮತಾ ಅವರು ಸಭೆಗೆ ಆಹ್ವಾನಿಸಿ ಎಲ್ಲರಿಗೂ ಪತ್ರ ಬರೆದಿದ್ದರು. ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಜೂನ್ 15 ರಂದು ದೆಹಲಿಯಲ್ಲಿ ಬ್ಯಾನರ್ಜಿ ಕರೆದ ಮೊದಲ ಸಭೆಯಲ್ಲಿ, “ದೇಶದ ಪ್ರಜಾಪ್ರಭುತ್ವದ ನೀತಿಯನ್ನು ಎತ್ತಿಹಿಡಿಯುವ” ಸಾಮಾನ್ಯ ಅಭ್ಯರ್ಥಿಯನ್ನು ಪ್ರತಿಪಕ್ಷವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.

ಕಾಂಗ್ರೆಸ್, ಸಮಾಜವಾದಿ ಪಕ್ಷ, ಎನ್‌ಸಿಪಿ, ಡಿಎಂಕೆ, ಆರ್‌ಜೆಡಿ ಮತ್ತು ಎಡಪಕ್ಷಗಳ ನಾಯಕರು ಎರಡು ಗಂಟೆಗಳ ಕಾಲ ತೃಣಮೂಲ ಕಾಂಗ್ರೆಸ್ ವರಿಷ್ಠರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು, ಆದರೆ ಎಎಪಿ, ಎಸ್‌ಎಡಿ, ಎಐಎಂಐಎಂ, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಒಡಿಶಾದ ಆಡಳಿತಾರೂಢ ಬಿಜೆಡಿ ಇದನ್ನು ಬಿಟ್ಟುಬಿಟ್ಟಿವೆ. ಶಿವಸೇನೆ, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್), ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿ(ಎಸ್), ಆರ್‌ಎಸ್‌ಪಿ, ಐಯುಎಂಎಲ್, ಆರ್‌ಎಲ್‌ಡಿ ಮತ್ತು ಜೆಎಂಎಂ ನಾಯಕರು ಉಪಸ್ಥಿತರಿದ್ದರು.

ಪವಾರ್ ಅವರ ನಾಲ್ಕು ವಾಕ್ಯಗಳ ಪತ್ರದಲ್ಲಿ ಹಿಂದಿನ ಸಭೆಯ ಉಲ್ಲೇಖವಿಲ್ಲ. ಹಾಗಾಗಿ ಆ ಸಭೆಗೆ ಹೋಗದಿರಲು ಮಮತಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜುಲೈ-ಆಗಸ್ಟ್ ನಲ್ಲಿ ‘ಲಾ..ನಿನಾ’ ದರ್ಶನ.. ದೇಶಕ್ಕೆ ಪ್ರವಾದ ಭಯ.. ರೈತರಿಗೆ ಗುಡ್ ನ್ಯೂಸ್..!

ಕಳೆದ ವರ್ಷ ಮಳೆಯಿಲ್ಲದೆ ಬೆಳೆದ ಬೆಳೆ ಸರಿಯಾಗಿ ಕೈಸೇರದೆ, ಸಾಲಾ-ಸೋಲ ಮಾಡಿ ರೈತ ಕಂಗಲಾಗಿದ್ದ. ಆದರೆ ಈ ಬಾರಿ ಆ ರೀತಿ ಇಲ್ಲ. ರೈತ ಫುಲ್ ಖುಷಿಯಾಗುವಂತಹ ವಾತಾವರಣವೇ ಸೃಷ್ಠಿಯಾಗಿದೆ. ಈಗಾಗಲೇ ಮಳೆಯೂ ಶುರುವಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸಲು ಮಹಾರಾಷ್ಟ್ರ ಸಿಎಂ ಸಹಾಯ ತೆಗೆದುಕೊಳ್ಳುತ್ತಿದ್ದಾರಾ..? ಏನಾಗ್ತಿದೆ ರಾಜ್ಯರಾಜಕಾರಣದಲ್ಲಿ..?

ಬೆಳಗಾವಿ: ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಗೆಲ್ಲಿವ ಮೂಲಕ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ಆದರೆ ಅಂದಿನಿಂದಾನು ಬಿಜೆಪಿ ಹಾಗೂ ಜೆಡಿಎಸ್ ನಾಯಕರದ್ದು ಒಂದೇ ವಾಕ್ಯ. ಈ ಲೋಕಸಭಾ ಚುನಾವಣೆಯ ಬಳಿಕ ಸರ್ಕಾರ ಬೀಳಲಿದೆ ಎಂದು.

ಮೇ 15 ರಂದು ರಾಜವೀರ ಮದಕರಿನಾಯಕರ 242 ನೇ ಪುಣ್ಯಸ್ಮರಣೆ : ಬಿ.ಕಾಂತರಾಜ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 13  : ರಾಜವೀರ ಮದಕರಿನಾಯಕರ 242 ನೆ ಪುಣ್ಯಸ್ಮರಣೆ ಮೇ. 15 ರಂದು ಸರಳವಾಗಿ

error: Content is protected !!