ಹೊಸದಿಲ್ಲಿ: ಇತ್ತೀಚೆಗೆ ನಡೆದ 15ನೇ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯು ಸಂಸತ್ ಭವನದಲ್ಲಿ ನಡೆಯುತ್ತಿದೆ. ರಾಷ್ಟ್ರಪತಿ ಚುನಾವಣೆ 2022 ರ ಮತಗಳ ಎಣಿಕೆ ಗುರುವಾರ (ಜುಲೈ 21, 2022) ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಡುವಿನ ಸ್ಪರ್ಧೆ ಏರ್ಪಟ್ಟಿತ್ತು. ಇಂದು ಅದರ ಫಲಿತಾಂಶ ಪ್ರಕಟವಾಗಲಿದೆ.
2022 ರ ರಾಷ್ಟ್ರಪತಿ ಚುನಾವಣೆ ಫಲಿತಾಂಶವು ಪ್ರಸ್ತುತ ರಾಮ್ ನಾಥ್ ಕೋವಿಂದ್ ಅವರ ನಂತರ ದೇಶದ 15 ನೇ ರಾಷ್ಟ್ರಪತಿಯಾಗಲು ಯಾರು ಎಂದು ಘೋಷಿಸುತ್ತದೆ. ಸಂಸತ್ ಭವನದ ಕೊಠಡಿ ಸಂಖ್ಯೆ 63ರಲ್ಲಿ ರಾಷ್ಟ್ರಪತಿ ಮತ ಎಣಿಕೆ ನಡೆಯುತ್ತಿದ್ದು, ಮತ ಎಣಿಕೆ ಮುಗಿದ ತಕ್ಷಣ ಫಲಿತಾಂಶ ಪ್ರಕಟವಾಗಲಿದೆ.