ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಮಗನಿಗಾಗಿ ಟಿಕೆಟ್ ಕೇಳಿದ್ದ ಈಶ್ವರಪ್ಪ ಅವರಿಗೆ ನಿರಾಸೆ ಆಗಿದೆ. ಹೀಗಾಗಿಯೇ ಬಂಡಾಯವೆದ್ದಿದ್ದು, ಪಕ್ಷೇತರವಾಗಿ ನಿಲ್ಲುವುದಾಗಿ ಪ್ರಚಾರ ಕಾರ್ಯ ಶುರು ಮಾಡಿದ್ದಾರೆ. ಈಗಾಗಲೇ ಅಮಿತ್ ಶಾ ಕೂಡ ದೆಹಲಿಗೆ ಬರುವುದಕ್ಕೆ ಹೇಳಿ, ಭೇಟಿ ಮಾಡದೆ ಈಶ್ವರಪ್ಪ ಅವರ ಕೋಪವನ್ನು ಮತ್ತಷ್ಟು ಹೆಚ್ಚು ಮಾಡಿದ್ದಾರೆ. ದೆಹಲಿಯಿಂದಾನೇ ಈ ಬಾರಿಯ ಲೋಕಸಭೆಗೆ ನಾನು ನಿಲ್ಲೋದು ಖಚಿತ ಎಂದು ಅಲ್ಲಿಂದಾನೇ ಸಮರ ಸಾರಿದ್ದಾರೆ.
ಈಶ್ವರಪ್ಪ ಅವರ ನಡೆಗೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕಿವಿ ಮಾತು ಹೇಳಿದ್ದಾರೆ. ಈಶ್ವರಪ್ಪ ಅವರಿಗೆ ಇನ್ನು ಕಾಲ ಮಿಂಚಿಲ್ಲ ಎಂದಿದ್ದಾರೆ. ಮೋದಿ ಜನಪ್ರಿಯತೆ ದಿನೇ ದಿನೇ ಜಾಸ್ತಿಯಾಗ್ತಾ ಇದೆ. ಮೈಸೂರು ಚಾಮರಾಜನಗರದ ಹೊಣೆಯನ್ನು ಪ್ರೀತಂ ಗೌಡ ಅವರಿಗೆ ನೀಡಿದ್ದೇವೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಬಹುಮತದಿಂದ ಗೆಲ್ಲುತ್ತಾರೆ. ಕೆ ಎಸ್ ಈಶ್ವರಪ್ಪ ಹಿರಿಯರು. ಪಕ್ಷ ಕಟ್ಟುವುದಕ್ಕೆ ಅವರದ್ದು ಬಹುಪಾಲಿದೆ. ಯಾವುದೋ ಪರಿಸ್ಥಿತಿ, ಸನ್ನಿವೇಶ ನಿಮ್ಮನ್ನು ಈ ರೀತಿಗೆ ದೂಡಿದೆ. ಮೊಪದಿ ಅವರು ಪ್ರಧಾನಿಯಾಗಲು ಪಕ್ಷದ ಹಿತದೃಷ್ಠಿಯಿಂದ ನೀವೂ ಕೈಜೋಡಿಸಬೇಕು. ಈಶ್ವರಪ್ಪ ಅವರಿಗೆ ಇನ್ನೂ ಕಾಲ ಮಿಂಚಿಲ್ಲ. ಕೈ ಜೋಡಿಸಿ ತಮಗೆ ವಿನಂತಿ ಮಾಡ್ತೇನೆ. ನಿಮ್ಮ ಸಮಸ್ಯೆ ಇದ್ದರೆ ದೆಹಲಿ ನಾಯಕರ ಜೊತೆ ಮಾತನಾಡಿ. ನಾವಂತೂ ನಿಮ್ಮ ಜೊತೆ ಇರುತ್ತೇನೆ. ನೀವು ಸಹ ನಮ್ಮ ಜೊತೆ ಇರಬೇಕು ಎಂಬುದು ನಮ್ಮ ಆಸೆ ಎಂದಿದ್ದಾರೆ.
ಇದೆ ವೇಳೆ ಕಾಂಗ್ರೆಸ್ ಪಕ್ಷ ಭ್ರಮೆಯಲ್ಲಿತ್ತು. ಮನೆ, ಮನೆಯಲ್ಲೂ ಮೋದಿ ಬಗ್ಗೆ ಮಾತನಾಡ್ತಿದ್ದಾರೆ. ಜನರು ಮೋದಿ ಗ್ಯಾರಂಟಿ ನೋಡ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ನೋಡ್ತಿಲ್ಲ. ರಾಜ್ಯದ 28 ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.