ಈಗಿರುವ ಸಂಸದರು ಬರ ಪರಿಸ್ಥಿತಿಯಲ್ಲೂ ಏನು ಮಾಡ್ತಿಲ್ಲ : ಲೋಕಸಭೆಯಲ್ಲಿ ಕಾಂಗ್ರೆಸ್ ಯಾಕೆ ಗೆಲ್ಲಬೇಕು ಎಂದು ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್

1 Min Read

 

ಉಡುಪಿ: ರಾಮಮಂದಿರ ಕಟ್ಟಲಿಕ್ಕೇನೆ ದೇಣಿಗೆ ಕೊಟ್ಟಿದ್ದೀನಿ. ವೈಯಕ್ತಿಕವಾಗಿ ನಾನು ದೇವರ ಭಕ್ತೆ. ರಾಮ ಇರಲಿ, ಕೃಷ್ಣ ಇರಲಿ, ಪರಮೇಶ್ವರ ಇರಲಿ. ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡ್ತೀನಿ. ಇಷ್ಟು ಮಾತ್ರ ಹೇಳಬಹುದು. ಬೇರೆ ಮಾತನಾಡುವುದಕ್ಕೆ ನಾನು ಪಕ್ಷದ ಅಧ್ಯಕ್ಷೆಯೂ ಅಲ್ಲ, ದೊಡ್ಡ ಸ್ಥಾನದಲ್ಲೂ ಇಲ್ಲ. ವೈಯಕ್ತಿಕವಾಗಿ ನಾನು ದೈವಿ ಭಕ್ತಳು. ರಾಮಮಂದಿರ ಏನು ಅವರದ್ದ..? ಅಥವಾ ನಮ್ಮದಾ..? ರಾಮ ಮಂದಿರ ಇರೋದು ಭಾರತ ದೇಶದಲ್ಲಿ. 140 ಕೋಟಿ ಜನಸಂಖ್ಯೆಯದ್ದು. ಅಯೋಧ್ಯೇಗೆ ಹೋಗೇ ಹೋಗ್ತೀನಿ. ಯಾವಾಗ ಅಂತ ಗೊತ್ತಿಲ್ಲ ಎಂದಿದ್ದಾರೆ.

ಇದೇ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಯತೀಂದ್ರ ಸಿದ್ದರಾಮಯ್ಯ ಅವರು ಯಾಕೆ ಆ ರೀತಿ ಹೇಳಿದರು ಎಂಬುದು ಗೊತ್ತಿಲ್ಲ. ಆದರೆ ನಮ್ಮೆಲ್ಲರದ್ದು ಲೋಕಸಭಾ ಚುನಾವಣೆ ಕಡೆಗೆ ಗಮನ ಇರುವುದು. ಚುನಾವಣೆಯಲ್ಲಿ ಅತ್ಯಧಿಕ ಸೀಟುಗಳನ್ನು ಗೆಲ್ಲುವುದಷ್ಟೇ ನಮ್ಮ ಗುರಿ. ಅದನ್ನಷ್ಟೇ ನಾನು ಮಾತನಾಡುವುದಕ್ಕೆ ಇಷ್ಟ ಪಡುತ್ತೀನಿ.

ಬರ ಪರಿಸ್ಥಿತಿ, ಜಿಎಸ್ ಟಿ ವಾಪಾಸ್ ತರುವುದಿರಲಿ ಏನೇ ಸಮಸ್ಯೆ ಬಂದರೂ ಈಗಿರುವ ಸಂಸದರು ಪರಿಹಾರ ತರುವುದಕ್ಕೆ ಯಾರೂ ಕುಇಡ ಪ್ರಯತ್ನ ಮಾಡುತ್ತಿಲ್ಲ. ಹೋಗ್ಲಿ ಈ ಬಾರಿ ಗಣರಾಜ್ಯೋತ್ಸವದಲ್ಲಿ ನಮ್ಮ ಟ್ಯಾಬ್ಲೋ ಕೂಡ ಇಲ್ಲ. ಕರ್ನಾಟಕ ಪ್ರತಿನಿಧಿಸುವ ಟ್ಯಾಬ್ಲೋ. ಆದರೂ ಒಬ್ಬರು ಕೂಡ ಎಲ್ಲೂ ಕಾಣಿಸುತ್ತಿಲ್ಲ. ಹೀಗಾಗಿ ಜನರಿಗೆ ಗೊತ್ತಿದೆ‌. ಏನು ಮಾಡಬೇಕು ಎಂಬುದನ್ನು ಜನ ನಿರ್ಧಾರ ಮಾಡಿದ್ದಾರೆ. ಅತ್ಯಂತ ಹೆಚ್ಚು ಸೀಟುಗಳನ್ನು ಗೆಲ್ಕಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *