ಬೆಂಗಳೂರು: ಕಾಂಗ್ರೆಸ್ ನಾಯಕರ ಮೇಕೆದಾಟು ಯೋಜನೆಗಾಗಿ ಶುರುವಾದ ಪಾದಯಾತ್ರೆ ಅರ್ಧಕ್ಕೆ ನಿಂತಿತ್ತು. ಇದೀಗ ಮತ್ತೆ ಶುರು ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ಜನವರಿ 9ರಿಂದ ಆರಂಭವಾಗಿದ್ದ ಪಾದಯಾತ್ರೆ ಐದೇ ದಿನಕ್ಕೆ ಮೊಟಕುಗೊಂಡಿತ್ತು. ಪಾದಯಾತ್ರೆ ನಿಲ್ಲಿಸುವಾಗಲೂ ಇದು ಇಲ್ಲಿಗೆ ನಿಲ್ಲಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದ್ರು. ಇಲ್ಲಿಗೆ ನಿಂತರು ಮತ್ತೆ ಬಿಡಲ್ಲ ಎಂದೇ ಹೇಳಿದ್ದರು. ಈ ಪಾದಯಾತ್ರೆಯನ್ನ ಡಿಕೆ ಬ್ರದರ್ಸ್ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದರು. ಇದೀಗ ಎಲ್ಲವೂ ತಹಬದಿಗೆ ಬಂದಿದ್ದು, ಮತ್ತೆ ಪುನರಾರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಫೆಬ್ರವರಿ 27ರಿಂದ ಪಾದಯಾತ್ರೆ ಆರಂಭಿಸಬೇಕೆಂದು ಫ್ಲ್ಯಾನ್ ಮಾಡಲಾಗಿದೆ. ಅಧಿವೇಶನದ ಅರ್ಧಕ್ಕೆ ಮೊಟಕುಗೊಂಡರೆ ಅಂದುಕೊಂಡ ಸಮಯಕ್ಕೆ ಮರುಚಾಲನೆ ಮಾಡಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ.