ಬೆಂಗಳೂರು: ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ ಈ ಭಾಗದಲ್ಲೆಲ್ಲಾ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಇದ್ದೇ ಇರುತ್ತದೆ. ಸಂಚಾರದ ಹಾದಿಗಳು ಹೆಚ್ಚಾದಾಗ ಟ್ರಾಫಿಕ್ ಕಿರಿಕಿರಿ ಕಡಿಮೆಯಾಗಬಹುದು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು, ವಿಪ್ರೋ ಮುಖ್ಯಸ್ಥ ಅಜಿತ್ ಪ್ರೇಮ್ ಜೀ ಅವರಿಗೆ ಮನವಿಯೊಂದನ್ನ ಮಾಡಿದ್ದರು. ಆದರೆ ಪ್ರೇಮ್ ಜೀ ಅವರು ಆ ಮನವಿಯನ್ನ ತಿರಸ್ಕಾರ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಔಟರ್ ರಿಂಗ್ ರೋಡ್ ನಲ್ಲಿ ರಸ್ತೆ ಟ್ರಾಫಿಕ್ ಕಡಿಮೆ ಮಾಡುವುದಕ್ಕೆ ವಿಪ್ರೋ ಕಂಪನಿಯ ಕ್ಯಾಂಪಸ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು. ಕ್ಯಾಂಪಸ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಅಜೀಂ ಪ್ರೇಮ್ ಜೀ ಉತ್ತರ ನೀಡಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ವಿಪ್ರೋ ಕೊಡುಗೆಯನ್ನು ಗುರುತಿಸಿದ್ದಕ್ಕಾಗಿ ತಮಗೆ ಧನ್ಯವಾದಗಳು. ಬೆಂಗಳೂರೊನಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ನಿಮ್ಮ ನಾಯಕತ್ವದಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬೆಂಗಳೂರಿನ ಔಟರ್ ರಿಂಗ್ ರೋಡ್ ರಫ್ತು ಆಧರಿತ ಎಕಾನಾಮಿಕ್ ಹಬ್ ಆಗಿದೆ. ವಿಪ್ರೋದ ಸರ್ಜಾಪುರ ಕ್ಯಾಂಪಸ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಡಲು ಕಾನೂನು, ಆಡಳಿತ, ಸಾಂಸ್ಥಿಕ ಸವಾಲುಗಳ ಸಮಸ್ಯೆ ಇದೆ. ವಿಪ್ರೋ ಕ್ಯಾಂಪಸ್ ಖಾಸಗಿ ಸ್ವತ್ತು ಆಗಿದೆ. ಷೇರು ಮಾರುಕಟ್ಟೆಯಲ್ಲಿ ನೋಂದಣಿ ಕಂಪನಿಯ ಸ್ವತ್ತು ಆಗಿದೆ. ಇದರೊಳಗಡೆ ಸಾರ್ವಜನಿಕ ಸಂಚಾರಕ್ಕರ ಅವಕಾಶ ಕೊಡುವುದಕ್ಕೆ ಸಾಧ್ಯವಿಲ್ಲ. ವಿಪ್ರೋ ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ಸೇರಿ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲು ಬದ್ದವಾಗಿದೆ ಎಂದು ಪತ್ರ ಬರೆದಿದ್ದಾರೆ.














