Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕುವೆಂಪು ವಿವಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ಗರ್ಭಿಣಿ ಅಶ್ವಿನಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವು..!

---Advertisement---

ಗರ್ಭಿಣಿಯಾದ ಮೇಲೆ ಸಾವಿರ ಕನಸುಗಳು ಚಿಗುರೊಡೆಯುತ್ತವೆ. ತಿನ್ನುವ ವಿಚಾರದಲ್ಲಿ, ಯೋಚಿಸುವ ವಿಚಾರದಲ್ಲಿ ಎಲ್ಲವೂ ಬದಲಾಗುತ್ತದೆ. ಕುಟುಂಬದವರೇ ಆಗಲಿ, ತಾಯಿಯಾಗುತ್ತಿರುವ ಮಹಿಳೆಯೇ ಆಗಲಿ ತನ್ನ ಒಳಗಿನ ಮಗುವಿನ ಆರೋಗ್ಯದ ಬಗ್ಗೆಯೇ ಯೋಚಿಸುತ್ತಾರೆ. ಆದರೆ ಆ ಮಗು ಕಣ್ಣು ಬಿಡದೆ, ಪ್ರಪಂಚವನ್ನೇ ಕಾಣದೆ ಹೋದರೇನೆ ಮನೆಯವರ ದುಃಖ ತಡೆಯೋದಕ್ಕೆ ಆಗಲ್ಲ. ಇನ್ನು ಗರ್ಭಿಣಿಯೂ ಜೀವ ಬಿಟ್ಟರೆ ಮನೆಯವರ ಮನಸ್ಥಿತಿ ಏನಾಗಬಹುದು ಹೇಳಿ. ಇಂಥದ್ದೊಂದು ಹೃದಯ ವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಅಶ್ವಿನಿ ಜೀವ ಬಿಟ್ಟ ಗರ್ಭಿಣಿ. ಇವರಿಗೆ ಈಗಿನ್ನೂ 29 ವರ್ಷ. ಹೊಸನಗರ ತಾಲೂಕಿನ ನಗರದ ಬಳಿಯ ಮೂಡುಗುಪ್ಪದ ದುಬಾರತಟ್ಟಿ ನಿವಾಸಿ ಇವರು. ಹೊಸನಗರದ ಅಮೃತಾನಂದ ಮಯಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಶ್ವಿನಿ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಸಿಎ ಪದವಿ ಮುಗಿಸಿದ್ದರು. ಓದುವುದರಲ್ಲಿ ಚಿನ್ನದ ಪದಕ ತೆಗೆದುಕೊಂಡಿದ್ದ ಪ್ರತಿಭಾವಂತೆ. ಒಂದೂವರೆ ವರ್ಷದ ಹಿಂದಷ್ಟೇ ಹೊಸನಗರದ ಅರಳಿ ಪ್ರಕಾಶ್ ಎಂಬುವವರ ಜೊತೆಗೆ ಮದುವೆಯಾಗಿತ್ತು.

ಅಶ್ವಿನಿ ಮನೆಯವರೆಲ್ಲಾ ತುಂಬಾ ಖುಷಿಯಾವಿದ್ದರು‌. ತಾಯಿಯಾಗುತ್ತಿರುವ ಸುದ್ದಿ ಸಂತಸ ತಂದಿತ್ತು. ಒಂದೂವರೆ ತಿಂಗಳ ಗರ್ಬಿಣಿಯಾಗಿದ್ದ ಅಶ್ವಿನಿ ಅವರು ತಪಾಸಣೆಗೆಂದು ಜನವರಿ 26ರಂದುಸಾಗರದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಭಾನುವಾರ ಆಸ್ಪತ್ರೆಯಲ್ಲಿಯೇ ಉಳಿದಿದ್ದರು. ಜನವರಿ 27 ರಂದು ಇದ್ದಕ್ಕಿದ್ದ ಹಾಗೇ ರಕ್ತಸ್ರಾವವಾಗುವುದಕ್ಕೆ ಶುರುವಾಗಿತ್ತು. ಗಾಬರಿಯಾದ ಕುಟುಂಬಸ್ಥರು ಅಶ್ವಿನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅಶ್ವಿನಿ ಕೊನೆಯುಸಿರೆಳೆದಿದ್ದಾರೆ. ಅಶ್ವಿನು ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿ ಮರಣೋತ್ತರ ಪರೀಕ್ಷೆ ಮುಗಿಸಿದ್ದಾರೆ. ಮಗುವೂ ಇಲ್ಲ, ಮಗಳು ಇಲ್ಲ. ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...