ಹಾಸನ: ಈ ಬಾರಿಯ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದೆ. ಬಿಜೆಪಿ ಶಾಸಕ ಪ್ರೀರಂ ಗೌಡರನ್ನು ಸೋಲಿಸುವುದಕ್ಕೆ ಜೆಡಿಎಸ್ ಸಜ್ಜಾಗಿದೆ. ಅದಕ್ಕೆಂದೆ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿ ರೇವಣ್ಣ ಕೂಡ ಮುನಿಸು ಮರೆತು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಆದ್ರೆ ಇಂಥ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮತದಾರರನ್ನೇ ಗೊಂದಲಕ್ಕೀಡು ಮಾಡುವಂತ ಹೇಳಿಕೆ ನೀಡಿದ್ದಾರೆ.
ಇಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರೀತಂ ಗೌಡ, ಜೆಡಿಎಸ್ ಗೆ ಮತ ಹಾಕಿದರು ಬಿಜೆಪಿಗೆ ಹಾಕಿದಂತೆ. ಇದನ್ನು ನಿಮ್ಮ ತಿಳುವಳಿಕೆಗಾಗಿ ಹೇಳುತ್ತಿದ್ದೇನೆ. ಜೆಡಿಎಸ್ ಗೆ ಮತ ಹಾಕಿದರು ಬಿಜೆಪಿ ಹಾಕಿದಂತೆಯೆ ಸರಿ. ಯಾಕಂದ್ರೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪ್ರಧಾನಿ ಮೋದಿಯವರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಅವರು ಗೆಲ್ಲುವುದು 20-25 ಸೀಟು ಅಷ್ಟೇ ಎಂದಿದ್ದಾರೆ.
2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೇವಣ್ಣ ಅವರ ಕುಟುಂಬ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೆ ಗೆಲ್ಲಿಸುವ ಕುತಂತ್ರವಿದು. ಒಮ್ಮೆ ರೇವಣ್ಣ ಅವರೇ ಹೇಳಿದ್ದಾರೆ. ಸ್ವರೂಪ್ ಯಾರೆಂಬುದು ತಿಳಿದಿಲ್ಲ ಅಂತ. ಈಗ ಇದ್ದಕ್ಕಿದ್ದಂತೆ ಪಕ್ಷದವರೆಲ್ಲ ಅವನ ಪರ ಪ್ರಚಾರ ಶುರು ಮಾಡಿದ್ದಾರೆ ಎಂದಿದ್ದಾರೆ.