ಹಾಸನ: ಮಾಜಿ ಸಿಎಂ ಕುಮಾರಸ್ವಾಮಿ ಈ ಮುಂಚೆ RSS ಬಗ್ಗೆ ಮಾತನಾಡಿದ್ರು. ಅದೇ ವಿಚಾರವನ್ನ ತೆಗೆದಿರೋ ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ. ನಮ್ಮ ಮಾತೃ ಸಂಸ್ಥೆ ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ರೆ ಅವರ ವೋಟ್ ಕೂಡ ಅವರಿಗೆ ಸಿಗಲ್ಲ ಎಂದಿದ್ದಾರೆ.
ಹಾಸನದಲ್ಲಿ ಮಾತನಾಡಿದ ಪ್ರೀತಂ ಗೌಡ, ಉಪಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ. ಯಾವತ್ತು ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ ಆರ್ ಎಸ್ ಎಸ್ ಬಗ್ಗೆ ಮಾತನಾಡಿದರೋ, ಅಂದೇ ಜನ ತೀರ್ಮಾನ ಮಾಡಿದ್ರು. ರಾಜಕೀಯದಲ್ಲಿ ಇವರು ಯಾವಮಟ್ಟಕ್ಕಾದರೂ ಹೋಗ್ತಾರೆ. ಇವರಿಗೆ ಬುದ್ಧಿ ಕಲಿಸಲು ಇದೇ ಸರಿಯಾದ ಸಮಯ ಎಂದು ತಿಳಿದು ಬುದ್ಧಿಕಲಿಸಿದ್ದಾರೆ.
ಉಪಚುನಾವಣಾ ಪ್ರಚಾರಕ್ಕೆ ಮಾಜಿ ಪ್ರಧಾನಿ ದೇವೆಗೌಡರು, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್ ಎಲ್ಲಾ ಹೋಗಿದ್ರು. ಒಬ್ಬೊಬ್ಬರಿಗೆ ಒಂದು ಸಾವಿರ ವೋಟ್ ಅಂದ್ರು ಆರು ಸಾವಿರ ಬರಬೇಕಿತ್ತು. ಆದ್ರೆ ಐದು ಸಾವಿರ ಕೂಡ ದಾಟಲಿಲ್ಲ ಎಂದಿದ್ದಾರೆ.
ಇನ್ನು ಸ್ಥಳೀಯ ಪಕ್ಷ ಬೆಳೆಯಬೇಕು ಎಂದು ಆಶಿಸುವವನಲ್ಲಿ ನಾನೂ ಒಬ್ಬ. ಯಾಕಂದ್ರೆ ನಾಡಿನ ಬಗ್ಗೆ ಹೋರಾಟ ಮಾಡುವ ಶಕ್ತಿ ಪ್ರಾದೇಶಿಕ ಪಕ್ಷಕ್ಕಿದೆ. ಇಡೀ ಪ್ರಪಂಚದಲ್ಲಜ ದೊಡ್ಡ ಪಕ್ಷ ಅಂದ್ರೆ ಅದು ಬಿಜೆಪಿ. ಬಿಜೆಪಿ ಬಗ್ಗೆ ವಿಶ್ಲೇಷಣೆ ಮಾಡಲು ಹೋದವರದ್ದು ಹಾನಗಲ್ ಮತ್ತು ಸಿಂದಗಿ ರಿಸಲ್ಟ್ ನೋಡಿಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.