ಚಿತ್ರದುರ್ಗ : ಇತ್ತೀಚಿನ ದಿನಗಳಲ್ಲಿ ಪ್ರಿವೆಡ್ಡಿಂಗ್ ಫೋಟೋಶೂಟ್ ಸಿಕ್ಕಾಪಟ್ಟೆ ಕಾಮನ್ ಆಗಿ ಹೋಗಿದೆ. ಮದುವೆಯಾಗಬೇಕೆಂದು ಬಯಸುವ ಪ್ರತಿಯೊಂದು ಜೋಡಿಯು ಪ್ರಿವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಆದರೆ ಮಾಡಿಸಿಕೊಳ್ಳುವ ಥೀಮ್ ಇದೆಯಲ್ಲ ಅದು ಒಮ್ಮೊಮ್ಮೆ ಡೇಂಜರ್ ಎನಿಸುತ್ತದೆ. ಎಲ್ಲರೂ ಮಾಡಿಸಿದಂತೆ ಮಾಡಿಸೋದು ಬೇಡ, ಡಿಫ್ರೆಂಟ್ ಆಗಿ ಫೋಟೋಶೂಟ್ ಮಾಡಿಸೋಣಾ ಅಂತ ಯೋಚನೆ ಮಾಡ್ತಾರಲ್ಲ ಅದು ಲೈಫ್ ನೇ ಡೇಂಜರ್ ಗೆ ತಿರುಗಿಸುತ್ತೆ. ಇದೀಗ ಚಿತ್ರದುರ್ಗದಲ್ಲೂ ಅದೇ ಆಗಿದೆ.

ಚಿತ್ರದುರ್ಗದ ಮದಕರಿಪುರ ಅಂಡರ್ ಪಾಸ್ ನಲ್ಲಿ ನಿನ್ನೆ (ಶನಿವಾರ) ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಪ್ಲ್ಯಾನ್ ಮಾಡಿದೆ. ಅದು ರೈಲ್ವೆ ಹಳಿ ಮೇಲೆ ಫೋಟೋಶೂಟ್ ಅದ್ಭುತವಾಗಿ ಬರುತ್ತದೆ ಎಂದುಕೊಂಡು ಫೋಟೋಶೂಟ್ ಮಾಡಿಸಲು ಹೋಗಿದ್ದಾರೆ. ಫೋಟೋಸ್ ತೆಗೆಯಲು ಐದು ಮಂದಿ ಹಳಿ ಮೇಲೆ ನಿಂತಿದ್ದರು. ಫೋಟೋಗ್ರಾಫರ್, ನವ ಜೋಡಿ ಹಳಿ ಮೇಲೆ ನಿಂತು ಶೂಟ್ ಪ್ಲ್ಯಾನ್ ಮಾಡಿದ್ದರು. ಆದರೆ ಏಕಾಏಕಿ ರೈಲು ಬಂದಿದೆ.

ಹಳಿ ಮೇಲೆ ಶೂಟ್ ಮಾಡುವುದಕ್ಕೆ ಯಾವುದೇ ಅನುಮತಿ ತೆಗೆದುಕೊಂಡಿರಲಿಲ್ಲ. ಕ್ಷಣ ಮಾತ್ರದಲ್ಲಿ ಎಲ್ಲರೂ ಪಾರಗಿದ್ದಾರೆ. ಸ್ವಲ್ಪ ಯಾಮಾರಿದ್ದರು ಕಷ್ಟವಾಗ್ತಾ ಇತ್ತು. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನವ ಜೋಡಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಫೋಟೋಗ್ರಾಫರ್ ಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ರೀತಿಯ ಹುಚ್ಚಾಟ ಆಡಿದರೆ ಮುಂದೆ ಸುಮ್ಮನೆ ಬಿಡಲ್ಲ ಅಂತ ಎಚ್ಚರಿಕೆಯನ್ನು ಕೊಟ್ಟು ಕಳುಹಿಸಿದ್ದಾರೆ. ಆದರೆ ಫೋಟೋಶೂಟ್ ಗೋಸ್ಕರ ಹೀಗೆ ಪ್ರಾಣವನ್ನೇ ಪಣಕ್ಕಿಟ್ಟರೆ ಹೇಗೆ..? ಫೋಟೋ ವಿಭಿನ್ನವಾಗಿ ಬರಬೇಕು ಅಂತ ಈ ರೀತಿ ರಿಸ್ಕ್ ತೆಗೆದುಕೊಳ್ಳಬಾರದು ಎಂದೇ ಸಲಹೆ ನೀಡಿದ್ದಾರೆ.


