ಪ್ರಯಾಗರಾಜ್ ಮಹಾ ಕುಂಭಮೇಳ : 40 ಕೋಟಿಗೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ : ರೈಲ್ವೆ ಇಲಾಖೆ ಸಿದ್ದತೆ ಹೇಗಿದೆ ?

suddionenews
2 Min Read

ಸುದ್ದಿಒನ್ : ಜನವರಿ 13 ರಿಂದ 45 ದಿನಗಳ ಪ್ರಯಾಗರಾಜ್ ಮಹಾ ಕುಂಭಮೇಳದಲ್ಲಿ 40 ಕೋಟಿಗೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ರೈಲುಗಳಲ್ಲಿ ಪ್ರತಿದಿನ ಲಕ್ಷಗಟ್ಟಲೆ ಜನರು ಆಗಮಿಸುವ ನಿರೀಕ್ಷೆಯಿರುವುದರಿಂದ ನಿಲ್ದಾಣಗಳಲ್ಲಿ ಕಾಲ್ತುಳಿತದಂತಹ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆ ತಿಳಿಸಿದೆ. ಕಾಲ್ತುಳಿತ ತಡೆಯಲು ವಿಶೇಷ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಿಪಿಆರ್‌ಒ ಶಶಿಕಾಂತ ತ್ರಿಪಾಠಿ ತಿಳಿಸಿದ್ದಾರೆ.

ಅಲ್ಲದೆ, ಟಿಕೆಟ್ ತೆಗೆದುಕೊಳ್ಳಲು ಕ್ಯೂಆರ್ ಕೋಡ್ ಮತ್ತು ಎಐ ಆಧಾರಿತ ಫೇಸ್ ರೆಕಗ್ನಿಷನ್ ಕ್ಯಾಮೆರಾಗಳ ಮೂಲಕ ನಾಪತ್ತೆಯಾದವರನ್ನು ಗುರುತಿಸಲಾಗುವುದು ಎಂದು ಹೇಳಿದರು.

ಸಾಮಾನ್ಯವಾಗಿ, ಹೋಗುವ ಮತ್ತು ಬರುವವರ ದಾರಿ ಒಂದೇ ಆಗಿರುವಾಗ ಕಾಲ್ತುಳಿತ ಸಂಭವಿಸುತ್ತದೆ. ತ್ರಿಪಾಠಿ ಅವರ ಪ್ರಕಾರ, ರೈಲು ನಿಲ್ದಾಣಗಳಲ್ಲಿ ಬರುವ ಮತ್ತು ಹೊರಗೆ ಬರುವ ಜನರಿಗೆ ವಿವಿಧ ಮಾರ್ಗಗಳನ್ನು ವ್ಯವಸ್ಥೆ ಮಾಡಲಾಗಿದೆ. ಬರುವವರನ್ನು ಸಿಟಿ ಲೈನ್‌ಗೆ, ಸಿವಿಲ್ ಲೈನ್‌ಗೆ ಹೋಗುವವರನ್ನು ಬೇರೆಡೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

ನೇರವಾಗಿ ಪ್ಲಾಟ್‌ಫಾರಂಗೆ ಬರುವ ಬದಲು ಹಳದಿ, ನೀಲಿ, ಕೆಂಪು, ಹಸಿರು ಎಂಬ ನಾಲ್ಕು ಬಣ್ಣಗಳಿಂದ ಪ್ರತ್ಯೇಕ ಆವರಣವನ್ನು ನಿರ್ಮಿಸಲಾಗಿದೆ. ವಾರಣಾಸಿಗೆ ಹೋಗಲು ಕೆಂಪು ಬಣ್ಣದ ಹಾದಿ, ಹೈದರಾಬಾದ್ ಕಡೆಗೆ ಹೋಗುವವರಿಗೆ ಹಳದಿ ಬಣ್ಣ, ಹೀಗೆ ಬಣ್ಣದ ದಾರಿಗಳನ್ನು ವ್ಯವಸ್ಥೆ ಮಾಡಲಾಗಿದ್ದು ಒಂದು ಹಾದಿಯಲ್ಲಿ ಒಮ್ಮೆಗೆ 5000 ಜನರು ಇರುವಂತೆ ವ್ಯವಸ್ಥೆ ಮಾಡಲಾಗಿದೆ.‌ನಾಲ್ಕರಲ್ಲಿ ಏಕಕಾಲಕ್ಕೆ 20 ಸಾವಿರ ಜನ ಬಂದರೂ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ
ಎಂದು CPRO ತಿಳಿಸಿದ್ದಾರೆ.

200 ಸ್ವಯಂಸೇವಕರು ಸೇರಿದಂತೆ
ಸುಮಾರು ಹತ್ತು ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರಯಾಗರಾಜ್‌ನಲ್ಲಿ ಒಂಬತ್ತು ರೈಲು ನಿಲ್ದಾಣಗಳಿದ್ದರೆ, 1186 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರೈಲುಗಳಲ್ಲಿ ಸುಮಾರು ಒಂದು ಕೋಟಿ ಜನರು ಬರುವ ನಿರೀಕ್ಷೆಯಿದೆ. ಕುಂಭಮೇಳದ 45 ದಿನಗಳಲ್ಲಿ, ದೇಶಾದ್ಯಂತ 13 ಸಾವಿರ ರೈಲುಗಳು ಪ್ರಯಾಗ್ ರಾಜ್‌ಗೆ ಓಡುತ್ತವೆ. ಇವುಗಳಲ್ಲಿ 3000 ವಿಶೇಷ ರೈಲುಗಳಿವೆ. ಕುಂಭಮೇಳದಲ್ಲಿ ಅಮಾವಾಸ್ಯೆ ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇರುವುದರಿಂದ ಅಂದು 350 ರೈಲುಗಳು ಸಂಚರಿಸುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕುಂಭಮೇಳದ ಸಮಯದಲ್ಲಿ ಪುಣ್ಯ ಸ್ನಾನದ (ಶಾಹಿ ಸ್ನಾನ) ವಿಶೇಷತೆ ಇರುತ್ತದೆ. ವಿವಿಧ ಅಖಾಡಾಗಳಿಂದ ಹೆಚ್ಚಿನ ಸಂಖ್ಯೆಯ ಸಾಧುಗಳು, ಸ್ವಾಮೀಜಿಗಳು ಮತ್ತು ಪೀಠಾಧಿಪತಿಗಳು ಬಂದು ಸಾಮೂಹಿಕ ಸ್ನಾನ ಮಾಡುತ್ತಾರೆ. ಇದಕ್ಕಾಗಿ ಪ್ರತ್ಯೇಕ ಮುಹೂರ್ತಗಳನ್ನು ಸಹ ನಿಗದಿಪಡಿಸಲಾಗಿದೆ. ಈ ವರ್ಷ ಕುಂಭಮೇಳವು ಜನವರಿ 13 ರಂದು ಮೊದಲ ಶಾಹಿ ಸ್ನಾನ ನಂತರ ಜನವರಿ 14 ರಂದು ಮಕರ ಸಂಕ್ರಾಂತಿಯಂದು ಎರಡನೇ ಸ್ನಾನ, ಜನವರಿ 29, ಫೆಬ್ರವರಿ 3, ಫೆಬ್ರವರಿ 13, ಫೆಬ್ರವರಿ 26 ರಂದು ಕೊನೆಯ ಸ್ನಾನದೊಂದಿಗೆ ಕೊನೆಗೊಳ್ಳುತ್ತದೆ.

Share This Article
Leave a Comment

Leave a Reply

Your email address will not be published. Required fields are marked *