ಬೆಂಗಳೂರು: ಬಿಜೆಪಿ ಮುಖಂಡ ಮೃತ ಪ್ರವೀಣ್ ನೆಟ್ಟಾರು ಪತ್ನಿಗೆ ಸರ್ಕಾರ ಕೆಲಸ ನೀಡಿದೆ. ಈ ಸಂಬಂಧ ಸಿಎಂ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಿದ್ದಾರೆ. ಸಿಎಂ ಸಚಿವಾಲಯದಲ್ಲಿ ಗ್ರೂಪ್ ಸಿ ಹುದ್ದೆ ನೀಡಿ ಆದೇಶಿಸಿದೆ. ಕೊಟ್ಟ ಮಾತಿನಂತೆಯೇ ಸಿಎಂ ನಡೆದುಕೊಂಡಿದ್ದಾರೆ. ಪ್ರವೀಣ್ ಪತ್ನಿ ನೂತಾನಾಗೆ ಕೆಲಸ ನೀಡಿದ್ದಾರೆ.
ಇತ್ತಿಚೆಗೆ ನಡೆದ ಜನಸ್ಪಂದನಾ ಕಾರ್ಯಕ್ರಮ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಬಗ್ಗೆ ಘೋಷಿಸಿದ್ದರು. ಪ್ರವೀಣ್ ನೆಟ್ಟಾರು ಕುಟುಂಬಸ್ಥರಿಗೆ ಸಿಎಂ ಕಚೇರಿಯಲ್ಲಿಯೇ ಕೆಲಸ ನೀಡುವುದಾಗಿ ತಿಳಿಸಿದ್ದರು. ಇದೀಗ ಆ ಮಾತಿನಂತೆಯೇ ನಡೆದುಕೊಂಡಿದ್ದಾರೆ. ಗ್ರೂಪ್ ಸಿ ಹುದ್ದೆ ನೀಡಿದ್ದಾರೆ.
ಜುಲೈ 26ರಂದು ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಬಂದ ದುಷ್ಕರ್ಮಿಗಳು ರಾತ್ರಿ 8 ಗಂಟೆಯ ಸುಮಾರಿಗೆ ತಲ್ವಾರ್ ನಿಂದ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು ಪ್ರವೀಣ್ ಬದುಕುಳಿಯಲಿಲ್ಲ. ತಮ್ಮ ಒಕ್ಷದ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಅಂತ ಬಿಜೆಪಿ ವಿರುದ್ಧ ಹಲವು ಕಾರ್ಯಕರ್ತರು ದಂಗೆ ಎದ್ದು ರಾಜೀನಾಮೆ ನೀಡಿದ್ದರು. ಅಂದು ಸರ್ಕಾರಕ್ಕೆ ಮುಜುಗರವಾದಂತಾಗಿತ್ತು. ಇದೀಗ ಸಿಎಂ ಹೇಳಿದಂತೆ ನಡೆದುಕೊಂಡಿದ್ದಾರೆ.