ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಸಂಬಂಧ ಡ್ರೈವರ್ ಅನ್ನು ಬಂಧಿಸಲಾಗಿದೆ. ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮಹಿಳಾ ಅಧಿಕಾರಿಯನ್ನು ಈತನೆ ಕೊಲೆ ಮಾಡಿರುವ ಮಾಹಿತಿ ಹೊರ ಬಿದ್ದಿದೆ. ಸುಬ್ರಮಣ್ಯ ನಗರ ಪೊಲೀಸರು ಈಗಾಗಲೇ ಮೂವರನ್ನು ವಶಕ್ಕೆ ಪಡೆದು ವಿಚಾತಣೆ ನಡೆಸಿದ್ದರು. ಅದರಲ್ಲಿ ಕಿರಣ್ ಎಂಬಾತನ ವಿಚಾರಣೆ ನಡೆಸಿದಾಗ, ಈತನೆ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ.
ಈ ಕಿರಣ್, ಅಧಿಕಾರಿ ಪ್ರತಿಮಾ ಕಾರಿನ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಒಂದು ವಾರ್ ಹಿಂದೆ ಕಿರಣ್ ನನ್ನು ಕೆಲಸದಿಂದ ವಜಾ ಮಾಡಲಾಗಿತ್ತಂತೆ. ಕೆಲ ವಿಚಾರಗಳಿಗೆ ಮೂಡಿದ್ದ ಭಿನ್ನಾಭಿಪ್ರಾಯದಿಂದ ಪ್ರತಿಮಾ ಅವರು ಕೆಲಸದಿಂದ ವಜಾಗೊಳಿಸಿದ್ದರಂತೆ. ಇದೆ ಕೋಪದಿಂದ ಕಿರಣ್, ಒಬ್ಬನೇ ಪ್ರತಿಮಾ ಅವರ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಹೊರ ಬಿದ್ದಿದೆ.
ಪ್ರತಿಮಾ ಅವರ ಕೊಲೆಗೆ ಕೆಲಸದಿಂದ ವಜಾ ಮಾಡಿದ್ದೇ ಕಾರಣವಾಯ್ತಾ ಎಂಬುದು ಮೇಲ್ನೋಟಕ್ಕೆ ತನಿಖೆಯಲ್ಲಿ ಅನುಮಾನ ಮೂಡಿಸಿದೆ. ಪ್ರತಿಮಾ ಅವರ ಮನೆಗೆ ಹೋಗಿ ಕೊಲೆ ಮಾಡಿರುವುದಾಗಿ ಮಾಹಿತಿ ಹೊರ ಬಿದ್ದಿದೆ. ಪೊಲೀಸರು ಕಿರಣ್ ಬಳಿ ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದು ಕಡೆ ಪ್ರತಿಮಾ ಭೂ ಮಾಫಿಯಾಗೆ ಬಲಿಯಾದ್ರಾ ಎಂಬ ಸುದ್ದಿಯೂ ಹರಿದಾಡುತ್ತಿದೆ. ಖಡಕ್ ಅಧಿಕಾರಿಯಾಗಿದ್ದ ಪ್ರತಿಮಾ ಹುಣಸಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಎಂಬ ಗ್ರಾಮದಲ್ಲಿ ಭೂ ಸರ್ವೆ ಮಾಡಿದ್ದರು. 4 ಎಕರೆ 5 ಗುಂಟೆ ಜಮೀನಿನಲ್ಲಿ ಅಕ್ರಮ ಗಣಿಗಾರಿಗೆ ಮಾಡಿ 25 ಲಕ್ಷ ನಷ್ಟ ಉಂಟಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪ್ರತಿಮಾ ವರದಿಯನ್ನು ಸಹ ಮಾಡಿದ್ದರು. ಈ ಸಂಬಂಧ ಶಾಸಕರೊಬ್ಬರ ಹೆಸರು ಸೇರಿದಂತೆ ಹಲವರ ಮೇಲೆ ಎಫ್ಐಆರ್ ಕೂಡ ದಾಖಲಾಗಿತ್ತು ಎನ್ನಲಾಗಿದೆ.