ಮೈಸೂರು: ನಗರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿರುವ ಸಂಸದ ಪ್ರತಾಪ್ ಸಿಂಹ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಾಹೇಬರು ಬಜೆಟ್ ನಲ್ಲಿ ನಮ್ಮ ಮೈಸೂರು ವಿಮಾನ ನಿಲ್ದಾಣದ ರನ್ ವೇ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ 140 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಲಿಕ್ಕೆ ಒಪ್ಪಿಕೊಂಡು ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು.
ಬಹಳ ಖುಷಿ ಏನು ಅಂದರೆ ಬಜೆಟ್ ನಲ್ಲಿ ಘೋಷಣೆಯಾಗಿದ್ದು, ಘೋಷಣೆಯಾಗಿಯೇ ಉಳಿಯುತ್ತದೆ. ಯಾಕಂದ್ರೆ ಬಜೆಟ್ ನಲ್ಲಿ ಘೋಷಣೆಯಾಗಿದ್ದು 50% ಇಂಪ್ಲಿಮೆಂಟೆ ಆಗಲ್ಲ. ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಾಹೇಬರು ಬಜೆಟ್ ನಲ್ಲಿ ಘೋಷಣೆಯನ್ನು ಮಾಡಿ, ಒಂದು ತಿಂಗಳು ಕೂಡ ಆಗಿಲ್ಲ. 319 ಕೋಟಿ ರೂಪಾಯಿಯನ್ನು ಕೂಡ ನಮಗೆ ರಿಲೀಸ್ ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ಸಮಸ್ತ ಮೈಸೂರಿನ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ.
ಮೈಸೂರಿನ ಏರ್ಪೋರ್ಟ್ ನಲ್ಲಿಯೇ ಮುಂದಿನ ದಿನಗಳಲ್ಲಿ ಅವಲಂಭಿಸುವಂತ ಮಂಡ್ಯ, ಚಾಮರಾಜನಗರ, ಕೊಡಗು ಈ ಭಾಗದ ಜನರ ಪರವಾಗಿ ನಾನು ಅನಂತ ಅನಂತ ಧನ್ಯವಾದ ಅರ್ಪಿಸುತ್ತೇನೆ. ಹೈವೇನಲ್ಲಿ ಎಮರ್ಜೆನ್ಸಿ ಇದ್ದಾಗ, ಅವಘಡಗಳು ಸಂಭವಿಸಿದಾಗ ಏರ್ ಲುಫ್ಟ್ ಮಾಡಬೇಕು ಎಂದಾಗ ಇದಕ್ಕೋಸ್ಕರ ಹೆಲಿಪ್ಯಾಡ್ ಕೂಡ ಮಾಡುತ್ತಿದ್ದೇವೆ. ಹೈವೇಯ ಮಧ್ಯೆ ಒಂದು ಕಡೆ ಹೆಲಿಪ್ಯಾಡ್ ಮಾಡುತ್ತೇವೆ. ರೆಸ್ಟ್ ಏರಿಯಾ ಕೂಡ ಮಾಡುತ್ತೇವೆ. ಸಾಕಷ್ಟು ಸೌಲಭ್ಯಗಳನ್ನು ರೆಸ್ಟ್ ಏರಿಯಾದಲ್ಲಿ ಸಿಗುತ್ತವೆ. ಮಳಿಗೆಗಳನ್ನು ಮಾಡಲಾಗುತ್ತೆ. ದೂರದ ಪ್ರಯಾಣ ಮಾಡಿದವರು ಈ ರೆಸ್ಟ್ ಏರಿಯಾದಲ್ಲಿ ವಿಶ್ರಾಂತಿ ಪಡೆಯಬಹುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.