ಜನರ ನಾಡಿಮಿಡಿತ ಅರಿಯುವುದು ರಾಜಕೀಯ ಪಕ್ಷಗಳಿಗೆ ದೊಡ್ಡ ಸವಾಲಿನ ಕೆಲಸವೇ ಸರಿ. ಚುನಾವಣೆ ಎಂದು ಬಂದಾಗ ರಾಜಕೀಯ ಪಕ್ಷಗಳು ಐಡಿಯಾ ಕೊಡುವವರ ಮೊರೆ ಹೋಗುತ್ತಾರೆ. ಅಂದ್ರೆ ರಾಜಕೀಯದಲ್ಲಿ ತಂತ್ರಗಾರಿಕೆ ಬಹಳ ಮುಖ್ಯ. ಯಾವ ಸ್ಟಾಟರ್ಜಿ ಯೂಸ್ ಮಾಡಬೇಕು ಎಂಬುದು ಚೆನ್ನಾಗಿ ಅರಿತಿರಬೇಕಾಗುತ್ತದೆ. ಹೀಗಾಗಿ ರಾಜಕಾರಣಿಗಳಿಗೆ ಚುನಾವಣಾ ವಿಚಾರದಲ್ಲಿ ಸಲಹೆಗಳನ್ನು ನೀಡುವುದರಲ್ಲಿ ಪ್ರಶಾಂತ್ ಕಿಶೋರ್ ಹೆಸರು ಉತ್ತುಂಗದಲ್ಲಿದೆ. ಆದರೆ ರಾಜಕೀಯ ಪಕ್ಷಗಳಿಗೆ ಸಲಹೆಗಳನ್ನು ನೀಡಲು ಎಷ್ಟು ಹಣ ಪಡೆಯಬಹುದು ಎಂಬ ಕುತೂಹಲಕ್ಕೆ ಪ್ರಶಾಂತ್ ಕಿಶೋರ್ ಅವರೇ ಬ್ರೇಕ್ ಹಾಕಿದ್ದಾರೆ. ಹಣದ ವಿಚಾರವನ್ನು ರಿವೀಲ್ ಮಾಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಪ್ರಶಾಂತ್ ಕಿಶೋರ್ ಅವರ ರಣತಂತ್ರವೇ ಕಾರಣ. ರಾಜಕೀಯ ಪಕ್ಷಗಳಿಗೆ ಸಲಹೆ ಕೊಡುತ್ತಿದ್ದವರು ಈಗ ಬಿಹಾರದಿಂದ ರಾಜಕಾರಣಕ್ಕೆ ಧುಮ್ಮುಕ್ಕಿದ್ದಾರೆ. ತಮ್ಮದೇ ಪಕ್ಷ ಕಟ್ಟಿ ಉಪಚುನಾವಣೆಗಳಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ಇದರ ನಡುವೆ ಸಲಹೆಗಾಗಿ ಎಷ್ಟು ಹಣ ತೆಗೆದುಕೊಳ್ಳುತ್ತಾರೆ ಎಂಬುದನ್ನು ಹೇಳಿದ್ದಾರೆ. ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕಾರಣಿಗೆ ಸಲಹೆಗಳನ್ನು ನೀಡಿದರು. ಅವರ ಬಳಿ 100 ಕೋಟಿ ಹಣ ಪಡೆಯುತ್ತಾರಂತೆ. ಬೆಲಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ‘ನನ್ನ ಬಳಿ ಹಣವಿಲ್ಲ. ಹೇಗೆ ಪ್ರಚಾರ ಮಾಡುತ್ತಾನೆ ಎಂದು ಹೇಳುತ್ತಾರೆ. ನಾನು ಯಾವುದೇ ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದರೂ ಅವರಿಂದ 100 ಕೋಟಿ ಪಡೆಯುತ್ತೇನೆ. ನನ್ನ ಸಲಹೆ ಪಡೆದ ಪಕ್ಷಗಳು 10 ರಾಜ್ಯದಲ್ಲಿ ಅಧಿಕಾರ ಹಿಡಿದಿವೆ ಎಂದಿದ್ದಾರೆ.