ಸತತ ಪ್ರಯತ್ನದ ನಡುವೆಯೂ ಕಾಂಗ್ರೆಸ್ ತಿರಸ್ಕರಿಸಿ ಪ್ರಶಾಂತ್ ಕಿಶೋರ್ ರಿಂದ ಹೊಸ ಪಕ್ಷ ಘೋಷಣೆ..!

ದೆಹಲಿ: ರಾಜಕೀಯ ನಿಪುಣ ಪ್ರಶಾಂತ್ ಕಿಶೋರ್ ರಿಂದ ಮಹತ್ವದ ನಿರ್ಧಾರ ಹೊರ ಬಿದ್ದಿದೆ. ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕರು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಸಲುವಾಗಿ ಸತತ ಪ್ರಯತ್ನ ಮಾಡಿದರು. ಆದರೆ ಅದೆಲ್ಲವನ್ನು ರಿಜೆಕ್ಟ್ ಮಾಡಿ ಇದೀಗ ಹಿಸ ಪಕ್ಷ ಘೋಷಣೆ ಮಾಡಿದ್ದಾರೆ.

ಬಿಜೆಪಿ, ಟಿಎಂಸಿ, ಡಿಎಂಕೆ ಸೇರಿದಂತೆ ಹಲವು ಪ್ರಮುಖ ರಾಜಕೀಯ ಪಕ್ಷಗಳು ಗದ್ದುಗೆ ಏರಲು ನೆರವಾಗಿದ್ದು ಇದೇ ಪ್ರಶಾಂತ್ ಕಿಶೋರ್. ಇವರ ರಾಜಕೀಯ ತಂತ್ರದಿಂದಲೇ ಆ ಪಕ್ಷಗಳು ಗದ್ದುಗೆ ಏರಲು ಸಾಧ್ಯವಾಗಿದ್ದು. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅವರನ್ನು ಸಂಪರ್ಕಿಸಿತ್ತು. ಈ ಬಾರಿ ಹೇಗಾದರೂ ಮಾಡಿ, ಅಧಿಕಾರದ ಗದ್ದುಗೆ ಹಿಡಿಯಲು ಬಯಸಿದ್ದ ಕಾಂಗ್ರೆಸ್ ಗೆ ಪ್ರಶಾಂತ್ ಕಿಶೋರ್ ಬರಲ್ಲ ಎಂದೇ ಹೇಳಿದ್ದರು.

ಹೊಸ ನಿರ್ಧಾರ ಪ್ರಕಟಿಸಿರುವ ಪ್ರಶಾಂತ್ ಕಿಶೋರ್ ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಎಲ್ಲರನ್ನು ಒಳಗೊಳ್ಳುವ ಅರ್ಥಪೂರ್ಣ ಪ್ರಜಾಪ್ರಭುತ್ವ ಮತ್ತು ಜನಸ್ನೇಹಿ ನೀತಿ ರೂಪಿಸುವ ನನ್ನ ಪ್ರಯತ್ನದ ಫಲವಾಗಿ 10 ವರ್ಷಗಳ ತಡೆಯಿಲ್ಲದ ಆಡಳಿತ ಅವಕಾಶಕ್ಕೆ ಮುನ್ನುಡಿ ಬರೆಯಿತು. ಈಗ ನಾನು ಪುಟ ತಿರುವಿ ಹಾಕಿದಂತೆ ಪ್ರಜಾಪ್ರಭುತ್ವದ ನಿಜವಾದ ಮಾಲೀಕರಾದ ಜನರ ಬಳಿಗೆ ಹೋಗಬೇಕಿದೆ. ವಿಚಾರಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಜನರಿಂದ ಉತ್ತಮ ಆಡಳಿತ ಸ್ಥಾಪಿಸಲು ಇದು ಸರಿಯಾದ ಸಮಯ ಎಂದುಕೊಂಡಿದ್ದೇನೆ. ಬಿಹಾರದಿಂದ ಈ ಪ್ರಯತ್ನ ಆರಂಭವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *