ಮದ್ಯಪಾನದ ವಯಸ್ಸು ಇಳಿಸಿದ ಸರ್ಕಾರದ ವಿರುದ್ಧ ಮುತಾಲಿಕ್ ಕೆಂಡಾಮಂಡಲ..!

 

 

ಉಡುಪಿ: ಮದ್ಯಪಾನ ಮಾಡುವ ವಯಸ್ಸು ಈ ಮುಂಚೆ 2 ಇತ್ತು. ಆದರೆ ಈಗ ಅದನ್ನು 18ಕ್ಕೆ ಸರ್ಕಾರ ಇಳಿಸಿದೆ. ಈ ನಿರ್ಧಾರವನ್ನು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮದ್ಯಪಾನದ ವಯಸ್ಸು 21ರಿಂದ 18ಕ್ಕೆ ಇಳಿಸಿದ್ದು ಖಂಡನೀಯ. ಮದ್ಯಪಾನಕ್ಕೆ ಕಡಿವಾಣ ಹಾಕಬೇಕಾಗಿರುವುದು. ಆದರೆ ಸರ್ಕಾರ ಇದನ್ನು ಪ್ರೋತ್ಸಾಹಿಸುತ್ತಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಈ ಕೂಡಲೇ ಈ ಆದೇಶವನ್ನು ಹಿಂಡೆಯಬೇಕು. ಕಾರ್ಮಿಕರು, ವಿದ್ಯಾರ್ಥಿಗಳು ಈ ಮದ್ಯಪಾನಕ್ಕೆ ಬಲಿಯಾಗುತ್ತಿದ್ದಾರೆ. ದೇಶಾದ್ಯಂತ ಈ ಮದ್ಯಪಾನವನ್ನು ನಿಷೇಧಿಸಬೇಕು. ಮದ್ಯಪಾನ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಮಹಾತ್ಮ ಗಾಂಧೀಜಿ ಅವರು 75 ವರ್ಷದ ಹಿಂದೆಯೇ ಸಲಹೆ ನೀಡಿದ್ದರು.

ಸರ್ಕಾರಗಳು ಅಸಹ್ಯ ಪರಿಸ್ಥಿತಿಯನ್ನು ನಿರ್ಮಿಸಿವೆ. ಮದ್ಯಪಾನವನ್ನೇ ಅನುಸರಿಸಿ ಸರ್ಕಾರ ರಾಜಕಾರಣ ಮಾಡುತ್ತಿದೆ. ರಾಜ್ಯ ಸರ್ಕಾರ ಈ ರೀತಿಯ ಆದೇಶದಿಂದ ಯುವಕರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ರಾಜ್ಯ ಸರ್ಕಾರ ಈ ಆದೇಶವನ್ನು ಹಿಂಪಡೆಯದೆ ಇದ್ದರೆ ಶ್ರೀರಾಮಸೇನೆ ಸೇರಿದಂತೆ ಮಹಿಳಾ ಸಂಘಟನೆಗಳು ಕೂಡ ಪ್ರತಿಭಟನೆ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!