ಹಾಸನ : ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವಕ್ಕೂ ಮುನ್ನ ಕುರಾನ್ ಪಠಣ ಮಾಡುವುದಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆಗೂ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಇಂದು ಶ್ರೀರಾಮಸೇನೆ ಬೇಲೂರು ತಾಲೂಕು ಘಟಕ ಉದ್ಘಾಟನೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಅವರು ಬೇಲೂರು ರಥೋತ್ಸವಕ್ಕೂ ಕುರಾನ್ ಗೂ ಏನು ಸಂಬಂಧ..? ಮುಂದಿನ ವರ್ಷವೇನಾದರೂ ತೇರಿಗೂ ಮುನ್ನ ಏನಾದರೂ ಕುರಾನ್ ಪಠಣ ಮಾಡಲು ಹೋದರೆ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಗೆ ಎಚ್ಚರಿಕೆ ನೀಡಿದ್ದಾರೆ.

ಬೇಲೂರಿನಲ್ಲಿ ಈ ವರ್ಷ ಶ್ರೀರಾಮ ಸೇನೆ ಇರಲಿಲ್ಲ. ಆದರೆ ನಿಮಗೆ ತಾಕತ್ತಿದ್ದರೆ ಮುಂದಿನ ವರ್ಷ ಪಠಣ ಮಾಡಿ ನೊಡೋಣಾ. ಕೂಡಲೇ ಇದನ್ನು ವಾಪಾಸ್ ತೆಗೆದುಕೊಳ್ಳದೆ ಹೋದಲ್ಲಿ ಗಲಭೆ, ಗಲಾಟೆಗಳು ನಡೆಯುತ್ತವೆ. ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

