ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಈಗ ಸರ್ವರಿಗೂ ಅನುಮತಿ ನೀಡಿ, ಸಾರ್ವಜನಿಕರ ಸ್ಥಳವಾಗಿ ಮಾಡಲಾಗಿದೆ. ಇದೀಗ ಇಂದು ಕನಕದಾಸ ಜಯಂತಿ ಪ್ರಯುಕ್ತ ಶ್ರೀರಾಮಸೇನೆ ಕನಕದಾಸ ಜಯಂತಿ ಆಚರಿಸಿದ್ದಾರೆ. ಈದ್ಗಾ ಮೈದಾನದಲ್ಲಿ ಕನಕದಾಸರ ಫೋಟೋ ಇಟ್ಟು, ಹೂಮಾಲೆ ಹಾಕಿ ಪೂಜೆ ಸಲ್ಲಿಸಿದ್ದಾರೆ.

ಇನ್ನು ಈದ್ಗಾ ಮೈದಾನದಲ್ಲಿ ನಿನ್ನೆಯಷ್ಟೇ ಟಿಪ್ಪು ಜಯಂತಿ ಆಚರಣೆ ಮಾಡಲಾಗಿತ್ತು. ಹೀಗಾಗಿ ಟಿಪ್ಪು ಕೂರಿಸಿದ್ದ ಜಾಗಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೋಮೂತ್ರ ಪ್ರೋಕ್ಷಣೆ ಮಾಡಿ, ಬಳಿಕ ಕನಕದಾಸರ ಫೋಟೋ ಇಟ್ಟಿದ್ದಾರೆ.ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಜಾಗದಲ್ಲಿಯೇ ಕನಕದಾಸರ ಫೋಟೋ ಇಡಲಾಗಿದೆ. ಪೆಂಡಾಲ್ ಹಾಕಿ, ಶಾಂತಿಯುತವಾಗಿ ಕನಕದಾಸ ಜಯಂತಿ ಆಚರಣೆ ಮಾಡಿದ್ದಾರೆ.

ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೊಟ್ಟ ಬೆನ್ನಲ್ಲೇ ಶ್ರೀರಾಮ ಸೇನೆ ಕೂಡ ಕನಕದಾಸರ ಜಯಂತಿ ಆಚರಣೆಗೆ ಅನುಮತಿ ಕೇಳಿತ್ತು. ಅರ್ಜಿಗಳ ಪರಿಶೀಲನೆ ನಡೆಸಿದ ಪಾಲಿಕೆ ಸರ್ವಪಕ್ಷಗಳ ಸಭೆ ಕರೆದು ಕನಕದಾಸ ಜಯಂತಿಗೂ ಅನುವು ಮಾಡಿಕೊಟ್ಟಿದ್ದರು. ಈದ್ಗಾ ಮೈದಾನದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಜಯಂತಿ ನಡೆಸಲು ಅನುಮತಿ ನೀಡಿದ್ದರು.

