ಚಿಕ್ಕಮಗಳೂರು: ವಾಟ್ಸಾಪ್ ಒಂದು ನೆಪ ಅಷ್ಟೇ. ಮಸೀದಿ ಮೇಲೆ ಭಗವಾನ್ ಧ್ವಜ ಹಾರಿಸಿದ್ದಾರೆ ಎನ್ನುವಂತದ್ದು, ಭಗವಾನ್ ಧ್ವಜ ಹಾರಿಸಿದ ಕೂಡಲೇ ಇಷ್ಟು ದೊಡ್ಡ ಗಲಭೆ, ಗಲಾಟೆ ಮಾಡುವಂತದ್ದಿಲ್ಲ. ಇವತ್ತು ಮುಸ್ಲಿಂರು ಕೇಸರಿ ಬಣ್ಣದ ಟೋಪಿ ಹಾಕಿಕೊಳ್ಳುತ್ತೀರಿ, ಹಿಜಾಬ್ ಅನ್ನು ಕೇಸರಿ ಬಣ್ಣದ್ದು ಹಾಕಿಕೊಳ್ತೀರಿ, ಬೇಕಾದಷ್ಟು ಕೇಸರಿ ಬಣ್ಣದ್ದು ನೀವೂ ಉಪಯೋಗಿಸ್ತಾ ಇದ್ದೀರಲ್ಲ. ಆಯ್ತು ನಿಮಗೆ ಒಪ್ಪಿಗೆ ಆಗದೆ ಹೋದರೆ ದೂರು ನೀಡಿ. ಧರಣಿ ಮಾಡಿ, ರ್ಯಾಲಿ ಮಾಡಿ ಆದರೆ ಕೈನಲ್ಲಿ ಕಲ್ಲು, ಅಸ್ತ್ರಗಳನ್ನು ಹಿಡಿದುಕೊಂಡು ಹೋಗುವುದು ಸರಿಯಲ್ಲ. ಇದನ್ನು ಖಂಡಿಸುತ್ತೇನೆ ಎಂದಿದ್ದಾರೆ.
ವಾಟ್ಸಾಪ್ ನಲ್ಲಿ ನೀವೂ ಮುಸ್ಲಿಂರು ಬೇಕಾದಷ್ಟು ಹಿಂದೂ ದೇವ ದೇವತೆಗಳನ್ನು ಅವಹೇಳನ ಮಾಡಿದ್ದು ಬೇಕಾದಷ್ಟಿದೆ. ನಮ್ಮ ಹಿಂದೂ ಸಮಾಜ ಎಂದಿಗೂ ಯಾವತ್ತಿಗೂ ಈ ರೀತಿ ಮಾಡಿಲ್ಲ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳುತ್ತೆ. ಕಾನೂನು ಕೈಗೆ ತೆಗೆದುಕೊಳ್ಳದೆ ಕಾನೂನಿನ ಮೂಲಕ ನ್ಯಾಯ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದೇವೆ ವಿನಃ ಈ ರೀತಿ ಮಾಡಿಲ್ಲ. ಎಂಎಸ್ ಹುಸೇನ್ ಮಾಡಿದ್ದಂತ ಕೆಲಸ ಎಂಥಾ ನೀಚ ಅವನು. ಎಂಎಸ್ ಹುಸೇನ್ ನಮ್ಮ ದೇವ ದೇವತೆಗಳನ್ನು ಬೆತ್ತಲೆಯಾಗಿ ಬಿಡಿಸಿದ ಆಗ ಅವನನ್ನು ಸುಟ್ಟಾಕಬೇಕಿತ್ತು. ಕೊಂದಾಕಬೇಕಿತ್ತು.
ಆದರೆ ಹಾಗೇ ಮಾಡಲಿಲ್ಲ. ಇಡೀ ರಾಜ್ಯದಲ್ಲಿ ಅವನ ಮೇಲೆ ದೂರು ನೀಡಿದೆವು. ಹಾಗೇ ಬೇಕಾದಷ್ಟು ರೀತಿಯಲ್ಲಿ ಮುಸ್ಲಿಂ ಸಮುದಾಯ ನಮ್ಮ ಹಿಂದೂ ಸಮುದಾಯವನ್ನು ಅವಹೇಳನ ಮಾಡಿದೆ. ಈಗ ವಾಟ್ಸಾಪ್ ನ ಹಿಂದೆ ಇಷ್ಡು ದೊಡ್ಡ ಗಲಭೆ ಮಾಡಿದ್ದು,ಅತ್ಯಂತ ಅಜ್ಷಮ್ಯ ಅಪರಾಧವನ್ನು ಮಾಡಿದ್ದೀರಿ ಎಂಬುದೇ ನನ್ನ ಅಭಿಪ್ರಾಯ. ಅವರ ಮೇಲೆ ದಾಳಿ ಮಾಡಬಹುದು ಎಂಬ ಭಯದ ವಾತಾವರಣದಿಂದ ಮನೆ ಬಿಟ್ಟು ಹೋಗಿದ್ದಾರೆ. ನಾನು ಪೊಲೀಸರಿಗೆ ಮನವು ಮಾಡುತ್ತೇನೆ. ಅವರಿಗೆ ರಕ್ಷಣೆಯನ್ನು ಕೊಡಬೇಕು, ಅವರೇನು ದೊಡ್ಡ ಅಪರಾಧ ಮಾಡಿಲ್ಲ. ಏನು ತಪ್ಪು ಮಾಡಿಲ್ಲ, ಅವರನ್ನು ಕೂಡಲೇ ಬಂಧಿಸಿದ್ದಾರೆ. ಆದರೆ ಅವರ ಮನೆಯವರು ಭಯಪಟ್ಟು ಇನ್ನೇಲ್ಲಿಯೋ ಇದ್ದಾರೆ. ಅವರಿಗೆ ರಕ್ಷಣೆ ಕೊಡಬೇಕಾಗಿದೆ ಎಂದಿದ್ದಾರೆ.