ಅಧಿವೇಶನದಲ್ಲಿ ಪ್ರತಿಧ್ವನಿಸಿದ ಪ್ರಜ್ವಲ್ ಕೇಸ್ : ತಪ್ಪು ಮಾಡಿದ್ರೆ ಗಲ್ಲಿಗಾಕಿ ಅಂದ್ರು ರೇವಣ್ಣ.. ಮಗನ ತಪ್ಪಿಗೆ ತಂದೆಗ್ಯಾಕೆ ಶಿಕ್ಷೆ ಅಂದ್ರು ಅಶೋಕ್..!

1 Min Read

ಬೆಂಗಳೂರು: ಅಧಿವೇಶನದಲ್ಲೂ ಪ್ರಜ್ವಲ್ ರೇವಣ್ಣ ಕೇಸ್ ಪ್ರತಿಧ್ವನಿಸಿದೆ. ರೇವಣ್ಣ ಅವರು ಮಾತನಾಡುವುದಕ್ಕೆ ನನಗೆ ಅವಕಾಶ ಕೊಡಬೇಕುಬೆಂದು ಹೆಚ್.ಡಿ. ರೇವಣ್ಣ ಮಾತು ಮುಂದುವರೆಸಿದ್ದಾರೆ. ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ ನಾನು ಬೇಡ ಎನ್ನಲ್ಲ. ನಾನು ವಹಿಸಿಕೊಳ್ಳುವುದಕ್ಕೂ ಬಂದಿಲ್ಲ, ಚರ್ಚೆ ಮಾಡುವುದಕ್ಕೂ ಬಂದಿಲ್ಲ. ಕಳೆದ 25 ವರ್ಷ ಶಾಸಕನಾಗಿ ಕೆಲಸ‌ ಮಾಡಿದ್ದೀನಿ. 40 ವರ್ಷ ರಾಜಕೀಯ ಜೀವನದಲ್ಲಿ ಇದ್ದೀನಿ. ಯಾರೋ ಹೆಣ್ಣು ಮಗಳನ್ನ ಕರೆದುಕೊಂಡು ಬಂದು ಡಿಜಿ ಕಂಪ್ಲೈಂಟ್ ಬರೆಸಿಕೊಳ್ತಾನೆ ಅಂದ್ರೆ ಅವನು ಡಿಜಿ ಆಗುವುದಕ್ಕೆ ನಾಲಾಯಕ್ ಎಂದಿದ್ದಾರೆ.

ರೇವಣ್ಣ ಅವರ ಈ ಮಾತಾಡುತ್ತಿದ್ದಂತೆ ಸಭೆಯಲ್ಲಿ ಗದ್ದಲ ಎದ್ದಿದೆ. ನಾಚಿಕೆ ಆಗುತ್ತೆ ಇಂಥವರಿಗೆ. ನೀಚಕೆಟ್ಟ ಸರ್ಕಾರ ಇದಜ ಅಂತ ಜೋರು ಜೋರು ಮಾತನಾಡಿದ್ದಾರೆ. ಅದರ ನಡುವೆ ನೀಚಕೆಟ್ಟ ಕೆಲಸ ಮಾಡಿರುವುದು ನಿಮ್ಮ ಮಗ ಎಂದು ಸಭೆಯಲ್ಲಿ ಕೇಳಿ ಬಂದಿದೆ.

ಇದರ ನಡುವೆ ರೇವಣ್ಣ ಅವರ ಪರವಾಗಿ ಮಾತನಾಡಿದ ಆರ್.ಅಶೋಕ್, ರೇವಣ್ಣ ಅವರ ಮಗನ ಕೇಸನ್ನು ಎಸ್ಐಟಿ ಅವರು ತನಿಖೆ ನಡೆಸುತ್ತಿದ್ದಾರೆ. ಎಸ್ಐಟಿ ಅವರ ತನಿಖೆ ಆದ್ಮೇಲೆ ನಲವತ್ತು ದಿನ ಆಗುತ್ತೆ. ಯಾರೂ ಕರೆದೆ ಇಲ್ಲ. ಪಾಪ ಅದು ರೇವಣ್ಣನ ಮಗ ಮಾಡಿದ ತಪ್ಪು. ಬಿಡಿ ನಾನ್ಯಾರನ್ನು ಸಮರ್ಥನೆ ಮಾಡುವುದಕ್ಕೆ ಹೋಗಲ್ಲ. ಇದು ಎಸ್ಐಟಿ. ವಾಲ್ಮೀಕಿ ಹಗರಣದಲ್ಲೂ ಎಸ್ಐಟಿ, ರೇವಣ್ಣ ಅವರಿಗೂ ಎಸ್ಐಟಿ, ಭವಾನಿ ರೇವಣ್ಣ ಕೇಸ್ ಗೂ ಎಸ್ಐಟಿ ಆ ಎಸ್ಐಟಿ ಎಷ್ಟು ಸ್ಟ್ರಾಂಗ್ ಅಂತ ನಾನು ಹೇಳ್ತೀನಿ. ಬೆಂಗಳೂರಲ್ಲಿ ರೇವಣ್ಣ ಮನೆ ಹತ್ರ ಇಪ್ಪತ್ತು ಜನ, ಹಾಸನ, ಹೊಳೆನರಸೀಪುರದಲ್ಲಿ ಇಪ್ಪತ್ತು ಜನ. ಆಗಿದ್ದು ಎರಡೇ ದಿನಕ್ಕೆ ಒಳಗೆ ಹಾಕಿದರು.

ಇವರೆಲ್ಲ ಎಸ್ಐಟಿ ನೋಟೀಸ್ ಕೊಟ್ಟ ತಕ್ಷಣ ಭಯ ಬಿದ್ದು ಕೋರ್ಟ್ ಹತ್ತಿರ ಹೋಗಿ ಕದ ತಟ್ಟಿದರು. ಆದರೆ ಈ ಇಬ್ಬರಿಗೂ ಯಾವ ಭಯವೂ ಇಲ್ವಲ್ಲ ಮೂವತ್ತು ದಿನವಾದರೂ ಈ ಎಸ್ಐಟಿನವರು ಏನ್ ಮಾಡ್ತಾ ಇದಾರೆ ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *