ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಕಳೆದ ತಿಂಗಳೇ ವಿದೇಶಕ್ಕೆ ಹಾರಿದ್ದರು. ಎಸ್ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿದೇಶಕ್ಕೆ ಹೋಗಿದ್ದ ಪ್ರಜ್ವಲ್, ಎರಡು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿಕೊಂಡಿದ್ದರು. ಎಸ್ಐಟಿ ಅಧಿಕಾರಿಗಳು ಕೂಡ ಕಾದು ಕಾದು ಸುಸ್ತಾದರೂ. ಕೋರ್ಟ್ ನಿಂದ ಕೂಡ ಎಚ್ಚರಿಕೆ ನೀಡಲಾಗಿತ್ತು. ಆದರೂ ಪ್ರಜ್ವಲ್ ರೇವಣ್ಣ ಬರುವ ಸೂಚನೆ ಕಾಣಿಸಿರಲಿಲ್ಲ. ಬರೋಬ್ಬರಿ ಒಂದು ತಿಂಗಳ ಬಳಿಕ ಪ್ರತ್ಯಕ್ಷಗೊಂಡು ಸದ್ಯ ವಿಮಾನ ಹತ್ತಿದ್ದಾರೆ.
ಜರ್ಮನಿಯ ಮ್ಯೂನಿಕ್ ನಿಂದ ಪ್ರಜ್ವಲ್ ರೇವಣ್ಣ ಅವರು ವೊಮಾನ ಹತ್ತಿದ್ದು, ಇಂದು ತಡರಾತ್ರಿ ಬೆಂಗಳೂರಿಗೆ ತಲುಪಲಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದ್ದಾರೆ. ಎರಡು ದಿನಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ಇಂದು ಹೊರಟಿದ್ದಾರೆ. ಲಗೇಜ್ ಕೂಡ ಜಾಸ್ತಿಯೇ ಇರುವುದು ಎಸ್ಐಟಿ ಅಧಿಕಾರಿಗಳಿಗೆ ತಿಳಿದು ಬಂದಿದೆ.
ಪ್ರಜ್ವಲ್ ರೇವಣ್ಣ ಹತ್ತಿರುವ ವಿಮಾನ ಮಧ್ಯಾಹ್ನ 3.46 ನಿಮಿಷಕ್ಕೆ ಹೊರಡಬೇಕಿತ್ತು. ಆದರೆ 29 ನಿಮಿಷ ತಡವಾಗಿ ಹೊರಟಿದೆ. ಹೀಗಾಗಿ ಮಧ್ಯರಾತ್ರಿ 12.59ಕ್ಕೆ ಬೆಂಗಳೂರು ತಲುಪಲಿದ್ದಾರೆ. ಏರ್ಪೋರ್ಟ್ ನಲ್ಲಿಯೇ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನಿಗಾಗಿ ಕಾದು ಕುಳಿತಿದ್ದಾರೆ. ಏರ್ಪೋರ್ಟ್ ನಲ್ಲಿಯೇ ಬಂಧಿಅಉವ ಯೋಜನೆ ರೂಪಿಸಿಕೊಂಡಿದ್ದಾರೆ. ಯಾಕಂದ್ರೆ ಪ್ರಜ್ವಲ್ ಮೇಲೆ ಈಗಾಗಲೇ ಲುಕ್ ಔಟ್ ನೋಟೀಸ್ ಕೂಡ ಹೊರಡಿಸಲಾಗಿದೆ. ಹೀಗಾಗಿ ಏರ್ಪೋರ್ಟ್ ಸುತ್ತಲೂ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಏರ್ಪೋರ್ಟ್ ಪೊಲೀಸರಿಗೂ ಪ್ರಜ್ವಲ್ ಮೇಲಿರುವ ಲುಕ್ ಔಟ್ ನೋಟೀಸ್ ಬಗ್ಗೆ ಮಾಹಿತಿ ನೀಡಿಲಾಗಿದೆ. ಅಲ್ಲಿನ ಪೊಲೀಸರೇ ಮೊದಲು ವಶಕ್ಕೆ ಪಡೆದು, ಆರೋಪಿಯ ಮಾಹಿತಿ ಕನ್ಫರ್ಮ್ ಮಾಡಿಕಿಂಡು, ಎಸ್ಐಟಿಗೆ ವಹಿಸಲಿದ್ದಾರೆ.