ಈ ಬಾರಿಯ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎಂ.ನಾಗರಾಜ ಅವರು ಭಾಜನರಾಗಿದ್ದಾರೆ. ಇವರು ಪ್ರಜಾವಾಣಿಯಲ್ಲಿ ಡೆಪ್ಯೂಟಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ಈ ಪ್ರಶಸ್ತಿಯನ್ನು 30 ಹಿರಿಯ ಪತ್ರಕರ್ತರು ಪಡೆದಿದ್ದು, ನಾಗರಾಜ ಅವರು 31ನೇಯವರಾಗಿದ್ದಾರೆ.
ಎಂ. ನಾಗರಾಜ ಅವರು ಮೂಲತಃ ಮೈಸೂರಿನವರಾಗಿದ್ದು, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಎಂ. ನಾಗರಾಜ ಅವರು ಮೈಸೂರು ಮಿತ್ರ, ಮಹಾನಂದಿ, ಸಾಧ್ವಿ ಪತ್ರಿಕೆಗಳಲ್ಲಿ ದುಡಿದು 1993ರಲ್ಲಿ ಪ್ರಜಾವಾಣಿ ಪ್ರವೇಶ ಮಾಡಿದರು. ಮೊದಲು ವರದಿಗಾರ, ಆಮೇಲೆ ಉಪಸಂಪಾದಕ, ಹಾಸನ ಜಿಲ್ಲಾ ವರದಿಗಾರ, ಬೆಂಗಳೂರಿನಲ್ಲಿ ಮುಖ್ಯ ವರದಿಗಾರ, ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥ, ಮತ್ತೆ ಬೆಂಗಳೂರಿನಲ್ಲಿ ಸುದ್ದಿ ಸಂಪಾದಕ. 2018ರಿಂದ ಡೆಪ್ಯೂಟಿ ಎಡಿಟರ್ ಆಗಿ ಈಗ ಕಾರ್ಯನಿರ್ವಹಿಸುತ್ತಿದ್ದಾರೆ.
ನಾಗರಾಜು ಅವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಸದ್ಯದಲ್ಲೇ ನಡೆಯಲಿದೆ. ಕಳೆದ ವರ್ಷ ಬಳ್ಳಾರಿಯಲ್ಲಿ ಪ್ರಜಾವಾಣಿಯ ವಿಶೇಷ ವರದಿಗಾರರಾಗಿದ್ದ ಹೊನಕೆರೆ ನಂಜುಂಡೇಗೌಡರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈ ಪ್ರಶಸ್ತಿಯು ₹15 ಸಾವಿರ ನಗದು ಹಾಗೂ ಫಲಕ ಹೊಂದಿದೆ.