ನವದೆಹಲಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನವೇ ಅನ್ನಭಾಗ್ಯ ಯೋಜನೆಯನ್ನು ಘೋಷಣೆ ಮಾಡಿತ್ತು. ಕೇಂದ್ರದಿಂದ ಅಕ್ಕಿ ದಾಸ್ತಾನು ಬಗ್ಗೆ ಪರಿಶೀಲನೆ ನಡೆಸಿ, ಅಲ್ಲಿಂದ ಒಪ್ಪಿಗೆ ಪಡೆದು ಜನರಿಗೆ ಆಶ್ವಾಸನೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕೇಂದ್ರದಿಂದ ಹಣ ಕೊಟ್ಟರು ಅಕ್ಕಿ ಕೊಡುತ್ತಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಕ್ಕೆ ಅಕ್ಕಿ ಕೊಡುವುದಕ್ಕೆ ಕೇಂದ್ರ ಸಿದ್ದವಿದೆ ಎಂದಿದ್ದಾರೆ.
ʻರಾಜ್ಯಕ್ಕೆ ಅಕ್ಕಿ ಕೊಡುವುದಕ್ಕೆ ಕೇಂದ್ರ ಸಿದ್ದವಿದೆ. ಮನವಿ ಬಂದರೆ ಅಕ್ಕಿಯನ್ನು ಕೊಡಲಿದೆ. ಕೆಜಿಗೆ 28 ರೂಪಾಯಿಯಂತೆ ನಾವೂ ಅಕ್ಕಿ ಕೊಡಲು ಸಿದ್ದರಿದ್ದೇವೆ. ಎಷ್ಟುಬೇಕಾದರೂ ಅಕ್ಕಿಯನ್ನು ಹಣ ಕೊಟ್ಟುಕೊಂಡುಕೊಳ್ಳಬಹುದು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಈ ಮೊದಲು ಅಕ್ಕಿ ಕೇಳಿದಾಗ ಸ್ಟಾಕ್ ಇಲ್ಲ ಎಂದೇ ಹೇಳಿದ್ದರು. ಈಗ ಇರುವ ಅಕ್ಕಿಯನ್ನು ಖಾಲಿ ಮಾಡಿದರೆ ತುರ್ತು ಸಂದರ್ಭದಲ್ಲಿ ಕಷ್ಟವಾಗಿತ್ತದೆ ಎಂದಿದ್ದರು. ಬಳಿಕ ರಾಜ್ಯದಿಂದ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಸಹ ಕೇಂದ್ರ ಸಚುವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಚರ್ಚೆಯೂ ನಡೆದಿತ್ತು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯ ಜೊತೆಗೆ ಇನ್ನು ಐದು ಕೆಜಿ ಅಕ್ಕಿಯ ಹಣವನ್ನು ನೀಡುತ್ತಿದೆ. ಈಗ ಕೇಂದ್ರ ಸರ್ಕಾರದಿಂದ ಬೇಕಾದಷ್ಟು ಅಕ್ಕಿ ಸಿಗಲಿದೆ, ಮನವಿ ಸಲ್ಲಿಸಿದರೆ ಹೆಚ್ಚುವರಿ ಅಕ್ಕಿ ನೀಡಲು ಸಿದ್ದ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಮನವಿ ಸಲ್ಲಿಸುತ್ತಾ ಅಥವಾ ಹಣವನ್ನೇ ಮುಂದುವರೆಸುತ್ತಾ ಎಂಬುದನ್ನು ನೋಡಬೇಕಿದೆ.