ದಾವಣಗೆರೆ (ಜ.24) : ದಾವಣಗೆರೆ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯ ಎಫ್-21 ತರಳುಬಾಳು ಫೀಡರ್ನಲ್ಲಿ ವಿದ್ಯುತ್ ತುರ್ತು ನಿರ್ವಹಣಾಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.25 ರಂದು ಬೆಳಿಗ್ಗೆ 10 ರಿಂದ ಸಂಜೆ 06.30 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಫ್-21 ತರಳುಬಾಳು ಫೀಡರ್ ಗ್ರಾಮಗಳಾದ ಶಿರಮಗೊಂಡನಹಳ್ಳಿ, ನಾಗನೂರು, ಹೊಸ ಬಿಸಿಲೇರಿ, ಹಳೇ ಬಿಸಿಲೇರಿ, 6ನೇ ಕಲ್ಲು, 7 ನೇ ಕಲ್ಲು ಮತ್ತುಬನಶಂಕರಿ ಬಡಾವಣೆ 2 ನೇ ಹಂತ ಹಾಗೂ ಇತರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.